March 26, 2026

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ

0
image_editor_output_image482543079-1701759532311.jpg

ಹೈದರಾಬಾದ್: ಹೈದರಾಬಾದ್ ನ ಅಂಬರ್ ಪೇಟೆಯ ಡಿಡಿ ಕಾಲೋನಿಯ ವ್ಯಕ್ತಿಯೋರ್ವರು ಆನ್ ಲೈನ್ ಅಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಅದರಲ್ಲಿ ಸತ್ತ ಹಲ್ಲಿಯೊಂದು ಫ್ರೀ ಸಿಕ್ಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಬಿರಿಯಾನಿ ಆರ್ಡರ್ ಮಾಡಿದ ವ್ಯಕ್ತಿಯು ತನ್ನ ಕುಟುಂಬದ ಸದಸ್ಯರ ಜೊತೆ ಸೇರಿರುವದಾಗಿ ಸ್ಥಳಿಯ ಹೋಟೆಲ್ ಒಂದರಿಂದ ಆನ್ ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿದರು. ಆರ್ಡರ್ ಮಾಡಿದ ಕೆಲವೇ ಹೊತ್ತಿನಲ್ಲಿ ಆ ಮನೆಗೆ ಪಾರ್ಸೆಲ್ ಬಂದಿದೆ.

ಬಿರಿಯಾನಿ ತಿನ್ನುವ ತವಕದಲ್ಲಿದ ಕುಟುಂಬವು ಬಿರಿಯಾನಿ ಬಾಕ್ಸ್ ಒಪನ್ ಮಾಡಿದಾಗ ಶಾಕ್ ಆಗಿದೆ. ಏನಪ್ಪ…ಶಾಕ್ ಅಂತ ಅನ್ಕೊಂಡ್ರ ರುಚಿ ರುಚಿಯಾದ ಬಿರಿಯಾನಿಯನ್ನು ಪ್ಲೇಟ್ ಗೆ ಹಾಕಿಕೊಂಡಾಗ ಅದರಲ್ಲಿ ಸತ್ತ ಹಲ್ಲಿಯು ಪತ್ತೆಯಾಗಿದೆ.

ಇದನ್ನು ಕಂಡ ಕುಟುಂಬವು ಗಾಬರಿಯಾಗಿದೆ. ತಪ್ಪಿ ಬಾಯಿಗೆ ಹಾಕುತ್ತಿದ್ದರೆ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಇತ್ತು.

Leave a Reply

Your email address will not be published. Required fields are marked *

error: Content is protected !!