March 26, 2026

ಕಾರ್ ನಲ್ಲಿ ಡ್ರಗ್ಸ್ ಸಾಗಾಟ ಪತ್ತೆ: ಇಬ್ಬರು ಆರೋಪಿಗಳ ಸಹಿತ, ಮಾರಕಾಯುಧ, 14 ಲಕ್ಷ ರೂ. ಮೌಲ್ಯದ ಸೊತ್ತು ವಶ

0
image_editor_output_image-1014216241-1701766780340.jpg

ಉಳ್ಳಾಲ: ಉಳ್ಳಾಲದ ಪೆರ್ಮನ್ನೂರು ಗ್ರಾಮದ ಸಂತೋಷನಗರ ಬಳಿ 132 ಗ್ರಾಂ ತೂಕದ ಮೆತಫಿಟಮೈನ್ ಮತ್ತು 250 ಎಲ್ಎಸ್ ಡಿ ಸ್ಟ್ಪಾಂಪ್‌ ಗ ಳನ್ನು ಅಕ್ರಮವಾಗಿ ಸಾಗಾಟ- ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಶಿಶಿರ್ ದೇವಾಡಿಗ ಹಾಗೂ ಶುಶಾನ್ ಎಲ್. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ನಿಷೇಧಿತ ಡ್ರಗ್ಸ್ ಜತೆಗೆ ಮಾರಕಾಯುಧಗಳು, 3.70 ಲಕ್ಷ ರೂ. ನಗದು, ಸ್ವಿಫ್ಟ್ ಕಾರು ಸೇರಿ ಒಟ್ಟು 14.01 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶವಪಡಿಸಿಕೊಳ್ಳಲಾಗಿದೆ ಎಂದು‌ ಪೊಲೀಸರ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!