August 19, 2026

ವಿಟ್ಲ: ಟೊಲೆಡೋ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್‌ನಲ್ಲಿ  ಪದವಿ ಪ್ರದಾನ ಸಮಾರಂಭ ಹಾಗೂ ‘ಹವಾ ಆರ್ಟ್ಸ್ ಫೆಸ್ಟ್’

0
image_editor_output_image-1495791437-1782825287738

ವಿಟ್ಲ: ಟೊಲೆಡೋ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ವತಿಯಿಂದ ಆಯೋಜಿಸಲಾದ ಗ್ರಾಜುಯೇಷನ್ ಡೇ ಹಾಗೂ ಹವಾ ಆರ್ಟ್ಸ್ ಫೆಸ್ಟ್ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು  ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ನಿರಂತರವಾಗಿ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.


  ಒಪ್ಪಂ ಸೈಕಾಲಜಿ ಸ್ಕೂಲ್ ಸಂಸ್ಥಾಪಕ  ಅಬ್ದುಲ್ಲಾ ಕುಂಞಿ ಮುಖ್ಯ ಭಾಷಣ ಮಾಡಿದರು. ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ; ನಿರಂತರ ಕಲಿಕೆ, ಉತ್ತಮ ವ್ಯಕ್ತಿತ್ವ ಮತ್ತು ಜೀವನ ಕೌಶಲ್ಯಗಳೇ ಯಶಸ್ಸಿನ ನಿಜವಾದ ಅಡಿಪಾಯ ಎಂದು ವಿದ್ಯಾರ್ಥಿಗಳಿಗೆ ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಎಮಿರೇಟ್ ನ ಪ್ರಾಂಶುಪಾಲ‌ ಜುಬೈರ್  ಬೊಬ್ಬೆಕ್ಕೇರಿ , ಮಹಮ್ಮದ್ ರಫೀಕ್ ಮಾಸ್ಟರ್, ನಿವೃತ್ತ ಪ್ರಾಧ್ಯಾಪಕ ಝುಬೈರ್ ಮಾಸ್ಟರ್ ಕಲ್ಲಿಪಾಲ, ನಾಲೆಜ್ ಹಬ್ ನ ನಿರ್ದೇಶಕ ಮಹಮ್ಮದ್ ಅಲಿ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ,  ಬದ್ರುದ್ದೀನ್ ,ಇಕ್ಬಾಲ್ ಶೀತಲ್ , ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಉಬೈದ್ ವಿಟ್ಲ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಉನ್ನತ ಗುರಿಗಳನ್ನು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಪ್ರೇರೇಪಿಸಿದರು.


ಸಮಾರಂಭದಲ್ಲಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಹವಾ ಆರ್ಟ್ಸ್ ಫೆಸ್ಟ್ ಅಂಗವಾಗಿ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಪ್ರತಿಭಾ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ನಿಝಾಮುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!