August 19, 2026

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ: ಆರು ಮಂದಿ ಮೀನುಗಾರರ ರಕ್ಷಣೆ

0
IMG-20260630-WA0076

ಮಂಗಳೂರು: ಸಮುದ್ರದಲ್ಲಿ ಪ್ರಕ್ಷುಬ್ಧ ಹವಾಮಾನದಿಂದಾಗಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಜೂನ್ 29 ರಂದು ಸೋಮವಾರ ಐಎಫ್‌ಬಿ ಮಂಜು ಮಾತಾ ದೋಣಿಯು ಪ್ರಕ್ಷುಬ್ಧಗೊಂಡಿರುವ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿತ್ತು.

ದೋಣಿಯ ಒಳಗೆ ನೀರು ತುಂಬಿಕೊಳ್ಳಲು ಪ್ರಾರಂಭಿಸಿದಾಗ ಅದರಲ್ಲಿದ್ದವರು ರಕ್ಷಣೆಗಾಗಿ ಕರಾವಳಿ ರಕ್ಷಣಾ ಪಡೆಯ ನೆರವು ಯಾಚಿಸಿದ್ದರು‌, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಸಾಚೇತ್‌ ನೌಕೆಯಲ್ಲಿ ಸ್ಥಳಕ್ಕೆ ತೆರಳಿ, ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಆರು ಮಂದಿಯನ್ನು ರಿಮೋಟ್-ಚಾಲಿತ ಜೀವರಕ್ಷಕ ಸಾಧನಗಳನ್ನು (ಲೈಫ್‌ಬಾಯ್‌ – Lifebuoys) ಬಳಸಿ ರಕ್ಷಣೆ ಮಾಡದ್ದಾರೆ.

ವೈದ್ಯಕೀಯ ಚಿಕಿತ್ಸೆ ಒದಗಿಸಲು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ಅವರನ್ನು ನವ ಮಂಗಳೂರು ಬಂದರಿಗೆ ಕರೆತರಲಾಗುತ್ತಿದೆ ಎಂದು ಕರಾವಳಿ ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!