August 17, 2026

ಮೆಟ್ರೊದಲ್ಲಿ ಅನುಮತಿಯಿಲ್ಲದೆ ಮಹಿಳೆಯ ಫೋಟೊ ಕ್ಲಿಕ್ಕಿಸಿದ ಆರೋಪ: ಸಿಐಎಸ್‌ಎಫ್ ಅಧಿಕಾರಿ ಅಮಾನತು

0
IMG-20260817-WA0032

ನವದೆಹಲಿ: ದೆಹಲಿ ಮೆಟ್ರೊದಲ್ಲಿ ಅನುಮತಿಯಿಲ್ಲದೆ ಮಹಿಳೆಯೊಬ್ಬರ ಫೋಟೊವನ್ನು ಕ್ಲಿಕ್ಕಿಸಿದ ಆರೋಪ ಮೇಲೆ ಸಿಐಎಸ್‌ಎಫ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಮಹಿಳೆಯು ಫೋಟೊ ಕ್ಲಿಕ್ಕಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಾಣಬಹುದಾಗಿದೆ.

ಮೊದಲಿಗೆ ಮಹಿಳೆಯ ಫೋಟೊ ತೆಗೆದಿಲ್ಲ ಎಂದು ಅಧಿಕಾರಿಯು ವಾದಿಸಿದ್ದರು. ತಕ್ಷಣ ಅವರ ಮೊಬೈಲ್‌ ಪರಿಶೀಲಿಸಿದಾಗ, ಫೋಟೊ ತೆಗೆದಿರುವುದು ಖಾತರಿಯಾಗಿದೆ. ನಂತರ ಇತರ ಪ್ರಯಾಣಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೋಟೊ ಡಿಲೀಟ್‌ ಮಾಡುವಂತೆ ಪ್ರಯಾಣಿಕರು ಒತ್ತಾಯಿಸಿದಾಗ, ಅಲ್ಲಿಂದ ತಪ್ಪಿಸಿಕೊಳ್ಳಲು ಅಧಿಕಾರಿ ಯತ್ನಿಸಿದ್ದಾನೆ. ಈ ವೇಳೆ ಅಧಿಕಾರಿಯನ್ನು ಹಿಡಿದು ಮತ್ತಷ್ಟು ದಬಾಯಿಸಿದ್ದಾರೆ.

ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಿಐಎಸ್‌ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾರಿಂದಲೂ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!