February 2, 2026

ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ:
ಮಾಜಿ ಶಾಸಕ ಕೆ. ವಿ. ಕುಂಞ ರಾಮನ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು

0
IMG-20211202-WA0072.jpg

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದುಮ ಮಾಜಿ ಶಾಸಕ ಕೆ. ವಿ ಕುಂಞ ರಾಮನ್ ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಕುಂಞರಾಮನ್ ಅಲ್ಲದೆ ಸಿಪಿಎಂ ಪಾಕಂ ಸಮಿತಿ ಕಾರ್ಯದರ್ಶಿ ರಾಘವನ್ ವೆಳ್ಳತ್ತೋಳಿ, ಗೋಪಾಲ್, ಸಂದೀಪ್ ವೆಳ್ಳತ್ತೋಳಿ, ಭಾಸ್ಕರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಐವರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ಇದರಿಂದ ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ ಹತ್ತು ಮಂದಿಯನ್ನು ಬಂಧಿಸಿದ್ದು, ಈ ಹಿಂದೆ ಕ್ರೈಂ ಬ್ರಾಂಚ್ ೧೪ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದರಿಂದ ಈ ಅವಳಿ ಕೊಲೆಯಲ್ಲಿ 24 ಮಂದಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!