July 27, 2024

ಪಂಚ ರಾಜ್ಯ ವಿಧಾನಸಭಾ ಚುನಾವಣೆ: ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನಗಳು: ಇಲ್ಲಿದೆ ಎಕ್ಸಿಟ್ ಪೋಲ್ ಸಮೀಕ್ಷೆ

0

ನವದೆಹಲಿ: ದೇಶದ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಕೊನೆಗೊಂಡಿದ್ದು, ವಿವಿಧ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ಹೇಳಿವೆ.

ತೆಲಂಗಾಣ:
119 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 60ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಕಾಂಗ್ರೆಸ್‌ 56 ಸ್ಥಾನಗಳನ್ನು, ಬಿಆರ್‌ಎಸ್‌ 58 ಸ್ಥಾನಗಳನ್ನು ಮತ್ತು ಬಿಜೆಪಿ 10ಸ್ಥಾನಗಳನ್ನು ಪಡೆಯುತ್ತದೆ ಎಂದು ಸಿಎನ್‌ನ್‌ ಸಮೀಕ್ಷೆ ಹೇಳುತ್ತದೆ.


ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ ಬಿಆರ್‌ಎಸ್‌ 40-55, ಕಾಂಗ್ರೆಸ್ 48-64, ಬಿಜೆಪಿ 7-13 ಎಐಎಂಐಎಂ 4-7ಕ್ಷೇತ್ರಗಳಲ್ಲಿ ಗೆಲುವು ಪಡೆಯುತ್ತದೆ.

ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್‌ಗೆ 58-71 ಪಡೆದು ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಆರ್‌ ಎಸ್‌ 37-51, ಬಿಜೆಪಿಗೆ 5 ಸ್ಥಾನಗಳು ಪಡೆಯುತ್ತದೆ.

ಛತ್ತಿಸ್‌ಗಢ:
90 ಸ್ಥಾನಗಳಲ್ಲಿ 46 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದ್ದು,ಕಾಂಗ್ರೆಸ್‌ 40-50 ಸ್ಥಾನಗಳನ್ನು ಮತ್ತು ಬಿಜೆಪಿ 36-46 ಸ್ಥಾನಗಳಲ್ಲಿ ಗೆಲುವಿನ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್‌ ಪೋಲ್‌ ಹೇಳುತ್ತದೆ.

ಟಿವಿ5 ನ್ಯೂಸ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿಗೆ 29-39 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 54-64 ಸ್ಥಾನಗಳು ಸಿಗಲಿವೆ.

ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ, ಕಾಂಗ್ರೆಸ್ 42-53 ಸ್ಥಾನಗಳು, ಬಿಜೆಪಿ 34-45 ಸ್ಥಾನಗಳು ಗಳಿಸಲಿದೆ.

ಎಬಿಪಿ ಸಿ ವೋಟರ್‌ ಸಮೀಕ್ಷೆ ಪ್ರಕಾರ, ಬಿಜೆಪಿ 36-48, ಕಾಂಗ್ರೆಸ್‌ 41-53 ಸ್ಥಾನ ಪಡೆಯುವ ಪಡೆಯುವ ಸಾಧ್ಯತೆ ಇದೆ.

ಮಧ್ಯಪ್ರದೇಶ:
230 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 116 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಬಹುಮತ ಪಡೆಯಲಿದೆ. ಅದು 118-130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 97-107 ಸ್ಥಾನಗಳನ್ನು ಗೆಲ್ಲಬಹುದು, ಇತರ ಪಕ್ಷಗಳು 2 ಸ್ಥಾನಗಳನ್ನು ಗೆಲ್ಲಬಹುದಾಗಿದೆ.

ಟಿವಿ9 ಭಾರತ್ ವರ್ಷ್ ಸಮೀಕ್ಷಾ ಪ್ರಕಾರ, ಕಾಂಗ್ರೆಸ್ 111-121 ಸ್ಥಾನಗಳಲ್ಲಿ ಮತ್ತು ಬಿಜೆಪಿ 106-116 ಸ್ಥಾನಗಳಲ್ಲಿ ಗೆಲುವಿನ ಸಾಧ್ಯತೆ ಇದೆ.

ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ, ಬಿಜೆಪಿ 100-123, ಕಾಂಗ್ರೆಸ್‌ 100-125 ಮತ್ತು ಇತರರು 5ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.

ರಾಜಸ್ಥಾನ:
200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 101 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಟಿವಿ9 ಭಾರತ್ ವರ್ಷ್ ಸಮೀಕ್ಷೆ ಪ್ರಕಾರ, ಬಿಜೆಪಿ 100-110, ಕಾಂಗ್ರೆಸ್‌ 90-100, ಇತರರು 5-15ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.

ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ, ಬಿಜೆಪಿ 100-112, ಕಾಂಗ್ರೆಸ್‌ 62-85, ಇತರರು 14-15ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.

ಮಿಜೋರಾಂ:
40 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 21 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ ಮಿಜೋರಾಂನಲ್ಲಿ ಎಮ್‌ ಎನ್‌ಎಫ್‌ಗೆ 10-14ಕ್ಷೇತ್ರಗಳು, ZPM 15-25ಕ್ಷೇತ್ರಗಳು, ಕಾಂಗ್ರೆಸ್ 5-9ಕ್ಷೆತ್ರಗಳು, ಬಿಜೆಪಿ 0-2ಕ್ಷೇತ್ರಗಳು ಲಭ್ಯವಾಗಲಿವೆ.

Leave a Reply

Your email address will not be published. Required fields are marked *

error: Content is protected !!