December 15, 2025

ಉಡುಪಿ: ವಿದೇಶದಲ್ಲಿ ಉದ್ಯೋಗ ಮಾಡಿಕೊಡುವ ಆಸೆ ತೋರಿಸಿ ವಂಚನೆ: ಇಬ್ಬರ ವಿರುದ್ಧ ದೂರು ದಾಖಲು
 

0
cm-case-filed-20012020mt-586.jpg


ಉಡುಪಿ: ವಿದೇಶದಲ್ಲಿ ಉದ್ಯೋಗ ಮಾಡಿ ಕೊಡುವ ಆಸೆ ತೋರಿಸಿ ವಿಸಾ ಮಾಡಿ ಕೊಡಲು ಲಕ್ಷಾಂತರ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ 1ನೇ ಆರೋಪಿ ಎಂದು ಗುರುತಿಸಲಾಗಿರುವ ಕೆಳಾರ್ಕಳಬೆಟ್ಟು ಗ್ರಾಮ ನೇಜಾರು ಓಡ್ರಿನ್ ಡಿಸೋಜಾ ಮತ್ತು 2ನೇ ಆರೋಪಿಯಾಗಿರುವ ಆಂದ್ರ ಪ್ರದೇಶ ಮೂಲದ ರಾಜು ಕೈ ಎಂಬವರ ವಿರುದ್ಧ ತೋನ್ಸೆ ಕಲ್ಯಾಣಪುರ ನಿವಾಸಿಯಾಗಿರುವ ರಾಯ್ಸನ್ ಅಂಟೋನಿ ಬರೆಟ್ಟೊ ದೂರು ದಾಖಲು ಮಾಡಿದ್ದಾರೆ.

ಆರೋಪಿತರಾಗಿರುವ ಓಡ್ರಿನ್ ಡಿಸೋಜಾ ಅವರು ಯು.ಕೆ. ಮತ್ತು ಕೆನಡಾ ದೇಶದಲ್ಲಿ  ಉದ್ಯೋಗಗಳಿದ್ದು ಅದಕ್ಕೆ 5,00,000 ಖರ್ಚಾಗುತ್ತದೆ. ಹಣವನ್ನು 2 ಕಂತುಗಳಲ್ಲಿ ಪಾವತಿಸಬೇಕೆಂದು ತಿಳಿಸಿದ್ದಾರೆ. ಅದಕ್ಕೆ ರಾಯ್ಸನ್ ಅಂಟೋನಿ ಬರೆಟ್ಟೊ ಅವರು ಒಪ್ಪಿಕೊಂಡಿದ್ದಾರೆ. ವೀಸಾದ ಸಲುವಾಗಿ ರೂಪಾಯಿ 2,50,000 ಬೇಕಾಗಿದ್ದು ಬಹರೈನ್ನಲ್ಲಿರುವ ರಾಜು ಕೈತ ಎಂಬುವವರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಓಡ್ರಿನ್ ಡಿಸೋಜಾ ತಿಳಿಸಿದ್ದು, ಅದರಂತೆ ದೂರುದಾರರು 1 ನೇ ಆರೋಪಿ ಮೊಬೈಲ್ನಿಂದ 2 ನೇ ಆರೋಪಿ ಹಣ ವರ್ಗಾವಣೆ ಮಾಡಿದ್ದಾರೆ.

ಆದರೆ ಹಣ ಕೊಟ್ಟು 3 ತಿಂಗಳು ಕಳೆದರೂ ವೀಸಾ ಮಾಡಿಕೊಡದೇ ಇದ್ದಾಗ 1ನೇ ಆರೋಪಿಯನ್ನು ಭೇಟಿಯಾಗಿ ಹಾಗೂ 2ನೇ ಆರೋಪಿಗೆ ಕರೆ ಮೂಲಕ ಸಂಪರ್ಕಿಸಿದಾಗ ಬಾಕಿ ಉಳಿದ ಹಣ ರೂಪಾಯಿ 2,50,000 ವನ್ನು ನೀಡಬೇಕೆಂದು ತಿಳಿಸಿದ್ದಾರೆ. ದೂರುದಾರರು ಮತ್ತೆ ಅದೇ ಖಾತೆಗೆ ಹಣ ಜಮಾಮಾಡಿ ದಾಖಲಾತಿಗಳನ್ನುನೀಡಿದ್ದಾರೆ.
ನಂತರ ದಿನಗಳು ಕಳೆದರೂ ವೀಸಾ ಮಾಡಿಕೊಡದೇ ಇದ್ದಾಗ ಅವರನ್ನು ಸಂಪರ್ಕಿಸಿ ಹಣವನ್ನು ವಾಪಾಸು ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ವೀಸಾ ಮಾಡಿಕೊಡದೇ ಹಣ ವಾಪಾಸು ನೀಡದೇ ಮೋಸ ಮತ್ತು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರ ರಾಯ್ಸನ್ ಅಂಟೋನಿ ಬರೆಟ್ಟೊ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!