December 22, 2024

ಕೆಲವೇ ದಿನದ ಬದುಕು ಪ್ರೀತಿ ವಿಶ್ವಾಸ ಸ್ನೇಹದಿಂದ ಕಳೆಯಿರಿ: ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್

0

ಮಾಣಿ: ನಾವು ಕೆಲವೇ ದಿನಗಳನ್ನು ಕಳೆಯಲು ಇಲ್ಲಿ ಬಂದವರು ಅಸೂಯೆ ದ್ವೇಷ ಮತ್ಸರಗಳು ಸುಳಿಯದಂತೆ ನೋಡಿಕೊಂಡು ಪ್ರೀತಿ ಸ್ನೇಹ ವಿಶ್ವಾಸದಿಂದ ಬದುಕಿದರೆ ಅದು ಅರ್ಥಪೂರ್ಣವಾಗುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಹಾಸನ ಮತ್ತು ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು.

 

 

ಅವರು ಕೆಎಂಜೆ ಎಸ್‌ವೈ‌ಎಸ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಸೂರಿಕುಮೇರು ಜಂಕ್ಷನ್ ಬಳಿ ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆಯಲ್ಲಿ ನಡೆದ ಬೃಹತ್ ಬುರ್ದಾ ಮಜ್ಲಿಸ್ ಸುನ್ನೀ ಸಮ್ಮೇಳನ ಕಾರ್ಯಕ್ರಮದಲ್ಲಿ ದುಆ ನಡೆಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ಇಸಾಕ್ ಸ‌ಅದಿ ಮಾಣಿ ಕಿರಾಅ‌ತ್ ಪಠಿಸಿದರು. ಮುಬಶ್ಶಿರ್ ಹಿಕಮಿ ಸ್ವಾಗತಿಸಿದರು. ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ಖತೀಬರಾದ ಮುಹಮ್ಮದ್ ಹನೀಫ್ ಸ‌ಅದಿ ಕುಂತೂರು ಕಾರ್ಯಕ್ರಮ ಉದ್ಘಾಟಿಸಿ ಬುರ್ದಾದ ಮಹತ್ವ ತಿಳಿಸಿದರು. ಕೆಎಂಜೆ ಮಾಣಿ ಸರ್ಕಲ್ ಅಧ್ಯಕ್ಷ ಇಬ್ರಾಹಿಂ ಸ‌ಅದಿ ಮಾಣಿ ಪ್ರಾಸ್ತಾವಿಕ ಭಾಷಣ ಮಾಡಿ ಶುಭಹಾರೈಸಿದರು. ಮುಫೀದ್ ಮಾಣಿ ಮತ್ತು ಅಜ್ಮಲ್ ಮಾಣಿ ಗೋಲ್ಡನ್ ಫಿಫ್ಟಿ ಹಾಡು ಹಾಡಿದರು.

ಕಾರ್ಯಕ್ರಮದ ಮೊದಲು ಮೌಲಿದ್ ಪಾರಾಯಣ ಮತ್ತು ಮಹ್‌ಳರತುಲ್ ಬದ್ರಿಯಾ ಬೈತ್ ಪಠಿಸಲಾಯಿತು. ಅತಿಥಿ ಗಾಯಕರಾಗಿ ನೌರತುಲ್ ಮದೀನಾ ಕೆಜಿಎನ್ ಹಿಫ್ಳ್ ವಿದ್ಯಾರ್ಥಿಗಳಾದ ಮುಹ್ಸಿನ್ ಕುಂಬ್ರ ಮತ್ತು ವಹೀದ್ ಚೆನ್ನಾರ್ ಆಕರ್ಷಕ ಮದ್‌ಹ್ ಗೀತೆಗಳನ್ನು ಹಾಡಿದರು. ಬಳಿಕ ಸಯ್ಯಿದ್ ತ್ವಾಹಾ ತಂಙಳ್ ಪೂಕೊಟೂರು ನೇತೃತ್ವದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಆಲಾಪನೆ ನಡೆಯಿತು. ತಂಡದಲ್ಲಿ ಶಾಹಿನ್ ಬಾಬು ತಾನೂರು, ಇನ್ಸಾಫ್ ಅಬೂಬಕರ್ ನಾಸಿಫ್ ಕ್ಯಾಲಿಕಟ್ ಮುಂತಾದವರು ಹಾಡಿದರು. ಕೊನೆಯಲ್ಲಿ ಅಸ್ಸಯ್ಯಿದ್ ಮುಹ್ಸಿನ್ ತಂಙಳ್ ಭಕ್ತಿ ನಿರ್ಭರವಾದ ದುಆಗೈದರು.

ವೇದಿಕೆಯಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಜಿ ಇಬ್ರಾಹಿಂ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ಬಾಲಕೃಷ್ಣ ಆಳ್ವ,ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್, ಕಾರ್ಯದರ್ಶಿ ಅಮೀರುದ್ದೀನ್, ಮಾಣಿ ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸ‌ಅದಿ ಬೆಟ್ಟಂಪಾಡಿ, ಅಧ್ಯಾಪಕ ನಝೀರ್ ಅಮ್ಜದಿ ಸರಳಿಕಟ್ಟೆ, ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಸದರ್ ಮು‌ಅ‌ಲ್ಲಿಂ ಇಬ್ರಾಹಿಂ ರಝ್ವಿ, ಕೆಎಂಜೆ ಮಾಣಿ ಸರ್ಕಲ್ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಪ್ರಿನ್ಸಿಪಾಲ್ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ, ಕೆಎಂಜೆ ಸೂರಿಕುಮೇರು ಯುನಿಟ್ ಉಸ್ತುವಾರಿ ಹಬೀಬ್ ಶೇರಾ, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಫಾರೂಕ್ ಶೂ ಪ್ಯಾಲೇಸ್, ಅಶ್ರಫ್ ಸಖಾಫಿ ಸೂರಿಕುಮೇರು, ಹಂಝ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಅಬ್ದುಲ್‌ ಕರೀಂ ಸೂರಿಕುಮೇರು, ಖಾದರ್ ಅರ್ಕ ಕೊಡಿಪ್ಪಾಡಿ, ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ಟೈಲರ್ ಹಸೈನ್ ಸೂರಿಕುಮೇರು, ಬದ್ರಿಯಾ ಮಸೀದಿ ಸೂರಿಕುಮೇರು ಅಧ್ಯಾಪಕರಾದ ಸವಾಝ್ ಹನೀಫಿ ಅಲ್ ಅಶ್‌ಹರಿ, ಸವಾದ್ ಮಾಣಿ, ದಾವೂದ್ ಕಲ್ಲಡ್ಕ, ಸ್ವಾಗತ ಸಮಿತಿಯ ಚೆಯರ್‌ಮೆನ್ ಹನೀಫ್ ಸಂಕ ಕನ್ವೀನರ್ ಹಸೈನ್ ಸಂಕ, ಅಝೀಂ ಸೂರಿಕುಮೇರು ಮುಂತಾದವರು ಉಪಸ್ಥಿತರಿದ್ದರು.

ಸೂರಿಕುಮೇರು ಪರಿಸರದ ಯುವಕರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಡಾಟ್ ಮೀಡಿಯಾದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿತ್ತು. ಹಾರಿಸ್ ಮದನಿ ಪಾಟ್ರಕೋಡಿ ಮತ್ತು ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!