ದೇರಳಕಟ್ಟೆ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು
ದೇರಳಕಟ್ಟೆ: ನಾಲ್ಕು ದಿನಗಳ ಹಿಂದೆ ಕುತ್ತಾರ್ ಪದವು ಸಮೀಪದ ಮದನಿ ನಗರದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ನಾಟೆಕಲ್ ಸಮೀಪದ ವಿದ್ಯಾನಗರ ನಿವಾಸಿಯಾಗಿರುವ ದೇರಳಕಟ್ಟೆ ಕಾನೆದ್ ಬೀಡಿ ಅಬುಬಕ್ಕರ್ ರವರ ಮಗ ಇಬ್ರಾಹಿಂ ಖಲೀಲ್ ಕಾನಕೆರೆ ರವರು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು.