6 ವರ್ಷದ ಬಾಲಕಿಯ ಅಪಹರಣ: 10 ಲಕ್ಷ ರೂ. ನೀಡುವಂತೆ ಬೇಡಿಕೆ
ತಿರುವನಂತಪುರಂ: ಸೋಮವಾರದಂದು ದಕ್ಷಿಣ ಕೇರಳದ ಪೂಯಪ್ಪಲ್ಲಿಯಿಂದ ಆರು ವರ್ಷದ ಬಾಲಕಿಯ ಅಪಹರಣದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖೆಯನ್ನು ತೀವ್ರಗೊಳಿಸುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣದ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಪೊಲೀಸರು ಅಪಹರಣವಾದ ಬಾಲಕಿಯ ಪತ್ತೆಗೆ ಪೊಲೀಸರು ತಂಡ ರಚನೆ ಮಾಡಿದ್ದು ಶೀಘ್ರದಲ್ಲಿ ಬಾಲಕಿ ಪತ್ತೆಯಾಗಲಿದೆ, ಯಾರು ಕೂಡ ಸುಳ್ಳು ಸುದ್ದಿಯನ್ನು ಹರಡಿಸಬಾರದು ಎಂದು ಜನರಲ್ಲಿ ವಿನಂತಿಸಿದ್ದಾರೆ.
ಇದರ ನಡುವೆ ಅಪಹರಣಕಾರರಿಂದ ಬಾಲಕಿಯ ಪೋಷಕರಿಗೆ ಮತ್ತೊಂದು ಕರೆ ಬಂದಿದ್ದು ಇದರಲ್ಲಿ ನೀಡಿದ ಮಾಹಿತಿಯ ಮೇರೆಗೆ ಬಾಲಕಿ ಸುರಕ್ಷಿತವಾಗಿದ್ದು 10 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದು ಹಣ ಸಿಕ್ಕಿದ ಕೂಡಲೇ ಬಾಲಕಿ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ.