December 22, 2024

ಕೇರಳ: ಟ್ಯೂಷನ್‌ಗೆ ತೆರಳುತ್ತಿದ್ದ ಬಾಲಕಿಯ ಅಪಹರಣ:
ಹಣಕ್ಕಾಗಿ ಬೇಡಿಕೆ

0

ಕೇರಳ: ಸೋಮವಾರ ಸಂಜೆ ಕೊಲ್ಲಂನ ಒಯೂರ್‌ ಎಂಬಲ್ಲಿರುವ ತನ್ನ ಮನೆಯಿಂದ ಅಣ್ಣನೊಂದಿಗೆ ಟ್ಯೂಷನ್‌ ತರಗತಿಗೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ಕು ಮಂದಿಯ ತಂಡವೊಂದು ಅಪಹರಿಸಿದ ಘಟನೆ ನಡೆದಿದೆ.

ಸಂಜೆ ಸುಮಾರು 4.30ಕ್ಕೆ ಘಟನೆ ನಡೆದಿದ್ದು ಬಾಲಕಿ ಅಬಿಗೆಲ್‌ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದಿದ್ದರು. ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಯಿತಾದರೂ ಆತ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ.

ಮಕ್ಕಳ ಹೆತ್ತವರಾದ ರೇಜಿ ಜಾನ್‌ ಮತ್ತು ಸಿಜಿ ಜಾನ್‌ ಇಬ್ಬರೂ ವೃತ್ತಿಯಲ್ಲಿ ನರ್ಸ್‌ ಆಗಿದ್ದು, ಘಟನೆ ನಡೆಯುವ ಸಂದರ್ಭದಲ್ಲಿ ಇಬ್ಬರೂ ಮನೆಯಲ್ಲಿರಲಿಲ್ಲ.

 

 

ಇದರ ನಡುವೆ ಅಪಹರಣಕಾರರಿಂದ ಬಾಲಕಿಯ ಪೋಷಕರಿಗೆ ಕರೆ ಬಂದಿದ್ದು ಇದರಲ್ಲಿ ನೀಡಿದ ಮಾಹಿತಿಯ ಮೇರೆಗೆ ಬಾಲಕಿ ಸುರಕ್ಷಿತವಾಗಿದ್ದು, 10 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದು ಹಣ ಸಿಕ್ಕಿದ ಕೂಡಲೇ ಬಾಲಕಿ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಪೊಲೀಸರಿಗೆ ಮಾಹಿತಿ ನೀಡದಂತೆ ಅಪಹರಣಕಾರರು ಪೋಷಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸದ್ಯ ಪೊಲೀಸರು ಅಪಹರಣವಾದ ಕೆಲವೇ ಹೊತ್ತಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಖಾಬಂಧಿ ನಡೆಸಿ ವಾಹನ ತಪಾಸಣೆ ನಡೆಸಿದ್ದಾರೆ ಆದರೆ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗಲಿಲ್ಲ.

ಪೊಲೀಸರು ಕೊಲ್ಲಂ, ಇಡುಕ್ಕಿ, ಕೊಟ್ಟಾಯಂ, ಪಟ್ಟಣಂತಿಟ್ಟ, ತಿರುವನಂತಪುರಂ ಮುಂತಾದೆಡೆ ವಾಹನಗಳ ತಪಾಸಣೆ ನಡೆಸುತ್ತಿದ್ದು. ತಡ ರಾತ್ರಿಯವರೆಗೂ ಹೆದ್ದಾರಿಗಳು, ಬಸ್ಸು ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ್ದಾರೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣದ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಪೊಲೀಸರು ಅಪಹರಣವಾದ ಬಾಲಕಿಯ ಪತ್ತೆಗೆ ಪೊಲೀಸರು ತಂಡ ರಚನೆ ಮಾಡಿದ್ದು ಶೀಘ್ರದಲ್ಲಿ ಬಾಲಕಿ ಪತ್ತೆಯಾಗಲಿದೆ, ಯಾರು ಕೂಡ ಸುಳ್ಳು ಸುದ್ದಿಯನ್ನು ಹರಡಿಸಬಾರದು ಎಂದು ಜನರಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!