December 22, 2024

ಶಾಲೆಗೆ ರಜೆ ಸಿಗಬೇಕೆಂದು ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಮೂವರು ವಿದ್ಯಾರ್ಥಿಗಳು ಅಸ್ವಸ್ಥ

0

ಕೋಲಾರ: ಬಂಗಾರಪೇಟೆ ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ಮಕ್ಕಳು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥರಾಗಿದ್ದ ಮಕ್ಕಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರು ತೊಂದರೆಯಾದರೆ ರಜೆ ಕೊಡುತ್ತಾರೆ. ನಂತರ ನಾನು ಊರಿಗೆ ಹೋಗಿ ತಂದೆ-ತಾಯಿಯನ್ನು ನೋಡಬಹದು ಎಂದು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಲೆಕ್ಕಾಚಾರ ಹಾಕಿದ್ದಾನೆ.

 

 

ಹೀಗಾಗಿ ಈತ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ದಾನೆ. ವಿದ್ಯಾರ್ಥಿ ಮಾನಸೀಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂಬ ವಿಷಯ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ವಿದ್ಯಾರ್ಥಿಯ ತಂದೆ ಮತ್ತು ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಮಗ ಚೆನ್ನಾಗಿ ಓದಲಿ ಎಂದು ಹಾಸ್ಟೆಲ್ಗೆ ದಾಖಲು ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!