ಬಂಟ್ವಾಳ: ಬೈಕ್ ಕಳ್ಳತನ ಮಾಡಿ ಹೋಗುವ ರಭಸಕ್ಕೆ ಅಪಘಾತ: ಆರೋಪಿ ಬೈಕ್ ಬಿಟ್ಟು ಪರಾರಿ
ಬಂಟ್ವಾಳ: ಬೈಕ್ ಕಳವು ಮಾಡಿಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಬೈಕ್ ಬಿಟ್ಟು ಪರಾರಿಯಾದ ಘಟನೆ ಇಂದು ಸಂಜೆ ವೇಳೆ ಬ್ರಹ್ಮರಕೋಟ್ಲು ಎಂಬಲ್ಲಿ ನಡೆದಿದೆ.
ಅತೀ ವೇಗ ಮತ್ತುಅಜಾಗಕರುಕತೆಯಿಂದ ಬೈಕ್ ಸವಾರ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ವಾಮದಪದವು ಗ್ರಾಮದ ಕೊರಗಟ್ಟೆ ನಿವಾಸಿ ಬೇಬಿ ಗೌಡ ಎಂಬವರ ಸ್ಲೆಂಡರ್ ಬೈಕ್ ಕಳವಾಗಿತ್ತು. ಬೇಬಿ ಗೌಡ ಅವರು ವಾಮದಪದವಿನಿಂದ ಬಿಸಿರೋಡು ವರೆಗೆ ಬೈಕ್ ನಲ್ಲಿ ಬಂದಿದ್ದು, ಅಬಳಿಕ ಬಿಸಿರೋಡಿನ ಪ್ಲೈ ಓವರ್ ನ ಅಡಿ ಭಾಗದಲ್ಲಿ ನಿಲ್ಲಿಸಿ, ಮಂಗಳೂರಿಗೆ ಬಸ್ ನಲ್ಲಿ ತೆರಳಿದ್ದರು.
ಇನ್ನು ಸಂಬಂಧಿಕರೋರ್ವರು ಅನಾರೋಗ್ಯದಿಂದ ಇದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ನೋಡಿಕೊಂಡು ಬರುವ ಹಿನ್ನೆಲೆಯಲ್ಲಿ ಬೈಕ್ ಬಿಸಿರೋಡಿನಲ್ಲಿ ನಿಲ್ಲಿಸಿ ಮಂಗಳೂರಿನತ್ತ ತೆರಳಿದ್ದರು. ಆಸ್ಪತ್ರೆಗೆ ಬೇಟಿ ನೀಡಿ ಬಸ್ ನಲ್ಲಿ ವಾಪಸು ಆಗುತ್ತಿರುವಾಗ ಮೋಬೈಲ್ ಕರೆ ಬಂದಿದ್ದು, ನಿಮ್ಮ ಬೈಕ್ ಬ್ರಹ್ಮರಕೋಟ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕ ರು ತಿಳಿಸಿದ್ದರು. ಇವರಿಗೆ ಆಶ್ಚರ್ಯ ಉಂಟಾಗಿ ನಾನು ಬೈಕ್ ಬಿಸಿರೋಡಿನಲ್ಲಿ ನಿಲ್ಲಿಸಿದ್ದೆ ಅಲ್ಲಿ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.
ಬಳಿಕ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ವಿಚಾರ ಸ್ಪಷ್ಟವಾಗಿದೆ. ಯಾರೋ ಅಂದಾಜು 45 ವರ್ಷದ ವ್ಯಕ್ತಿ ಬೈಕ್ ಕಳವು ಮಾಡಿಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಆತ ಅಲ್ಪಸ್ವಲ್ಪ ಪ್ರಮಾಣದಲ್ಲಿ ಗಾಯವುಂಟಾಗಿದೆ. ನಿಂತರೆ ಅಸಲಿ ಕಥೆ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಸ್ಥಳದಿಂದ ಕಾಲ್ಕಿತ್ತ ಬಗ್ಗೆ ಅಲ್ಲಿ ಸೇರಿ ದ ಜನ ತಿಳಿಸಿದ್ದಾರೆ.