ಹಳೇ ವೈಷಮ್ಯದಿಂದ ಯುವಕನ ಬರ್ಬರವಾಗಿ ಹತ್ಯೆ
ಬೆಳಗಾವಿ: ಹಳೇ ವೈಷಮ್ಯದಿಂದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಗೋಕಾಕ್‍ನಲ್ಲಿ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ಶಾನೂರು ಪೂಜಾರಿ (27) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಯುವಕ ನಗರದ ಪೆಟ್ರೊಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಮೃತ ಯುವಕನ ಪರವಾಗಿ ಮತ್ತೊಂದು ಗುಂಪು ಆದಿಜಾಂಬವ ನಗರದಲ್ಲಿರುವ ಆರೋಪಿಯ ಮನೆ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಉದ್ವಿಘ್ನ ಯುವಕರ ಗುಂಪು ಆರೋಪಿಯ ಮನೆ ಮೇಲೆ ಕ್ಲಲು ತೂರಾಟ ನಡೆಸಿದೆ. ಅಲ್ಲದೇ ಯುವಕರು ಬೈಕ್ ಹಾಗೂ ಕಾರುಗಳನ್ನು ಜಖಂಗೊಳಿಸಿದ್ದಾರೆ





