April 6, 2026

ತೆಕ್ಕಟ್ಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ: ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿ

0
image_editor_output_image-946233989-1771317933754.jpg

ಕುಂದಾಪುರ : ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರ ಕನ್ನುಕೆರೆ ಸಮೀಪದ ಆಶ್ಲೇಷ ಆನ್‌ಲೈನ್ ಸರ್ವೀಸ್ ಸೆಂಟ‌ರ್’ನಲ್ಲಿ ಸೋಮವಾರ (ಫೆ.16) ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದುರಂತದಿಂದ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

ಎಂದಿನಂತೆ ಅಂಗಡಿ ಮಾಲಕ ಫಣಿರಾಜ್ ಹತ್ವಾರ್ ಕೊರವಡಿ ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ ನಂತರ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಸ್ಟೇಷನರಿ ಸಾಮಗ್ರಿಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಪರಿಕರಗಳು ಸುಟ್ಟು ಭಸ್ಮವಾಗಿವೆ.

Leave a Reply

Your email address will not be published. Required fields are marked *

error: Content is protected !!