April 8, 2026

ಭೀಕರ ರಸ್ತೆ ಅಪಘಾತ: ಟ್ರಕ್ ನಡಿಗೆ ಕಾರು ಸಿಲುಕಿ ಆರು ಮಂದಿ ಮೃತ್ಯು

0
image_editor_output_image-1264925982-1699940258043

ಉತ್ತರಪ್ರದೇಶ: ಉತ್ತರ ಪ್ರದೇಶ ರಾಜ್ಯದಲ್ಲಿ ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಜಾಫರ್‌ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ಕಾರೊಂದು ಟ್ರಕ್‌ನಡಿ ಸಿಲುಕಿ ಆರು ಮಂದಿ ಮೃತಪಟ್ಟಿದ್ದಾರೆ.

ಮುಜಾಫರ್‌ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಮಂದಿ ಪ್ರಯಾಣಿಕರಿದ್ದ ಕಾರು 22 ಚಕ್ರಗಳ ಟ್ರಕ್‌ನಡಿ ಸಿಲುಕಿಕೊಂಡಿದೆ. ಈ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಡೆದಿದ್ದೇನು?: ದೆಹಲಿಯಿಂದ ಹರಿದ್ವಾರಕ್ಕೆ ತೆರಳುತ್ತಿದ್ದ ಕಾರು ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಚಾಪರ್ ಪ್ರದೇಶದ ರಾಂಪುರ ಕ್ರಾಸಿಂಗ್ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಟ್ರಕ್‌ನಡಿ ಸಿಲುಕಿ ಕೆಲವು ಮೀಟರ್‌ ದೂರ ಸಾಗಿದೆ. ಕಾರು ಅಪಘಾತದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತರು ದೆಹಲಿಯ ಶಹದಾರ ನಿವಾಸಿಗಳು ಎಂದು ಮುಜಾಫರ್‌ನಗರ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!