April 8, 2026

ವೀರಕಂಬ: ಬೆಂಕಿ ದುರಂತದಿಂದ ಮನೆ, ಸೊತ್ತುಗಳನ್ನು ಕಳೆದುಕೊಂಡ ಬಡ ಕುಟುಂಬ: ಸಂಕಷ್ಟಕ್ಕೆ ವಿಟ್ಲ ಠಾಣಾ ಪೊಲೀಸರಿಂದ ನೆರವು

0
image_editor_output_image1623514100-1771231204201.jpg

ಇತ್ತೀಚೆಗೆ ವೀರಕಂಬ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ಬೆಂಕಿ ದುರಂತದಿಂದ ಸಂಪೂರ್ಣವಾಗಿ ಮನೆ, ಸೊತ್ತುಗಳನ್ನು ಕಳೆದುಕೊಂಡ ಬಡ ಕುಟುಂಬದ ರಾಜೇಶ್ವರಿ ಮತ್ತು ಮಕ್ಕಳಿಬ್ಬರ ಸಂಕಷ್ಟಕ್ಕೆ ವಿಟ್ಲ ಠಾಣಾ ಪೊಲೀಸರು ನೆರವು ನೀಡುವ ಮೂಲಕ ಸ್ಪಂದಿಸಿದ್ದಾರೆ.

ಅದೇ ರೀತಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ಕರ್ನಾಟಕ ರಾಜ್ಯ ದಕ್ಷಿಣ ಕೇಂದ್ರ ಕಚೇರಿ ವಿಟ್ಲ. ಕೃಷಿ ಕಾರ್ಮಿಕ ರೈತ ಯೋಜನೆಯ ವತಿಯಿಂದ ಸಹಾಯಧನ ನೀಡುವ ಮೂಲಕ ರಾಜೇಶ್ವರಿ ಅವರ ಸಂಕಷ್ಟದಲ್ಲಿ ಸಂಸ್ಥೆಯೊಂದು ಭಾಗಿಯಾಗಿದೆ.

ಬೆಂಕಿ ದುರಂತ ಸಂಭವಿಸಿದ ಎರಡು ದಿನದಲ್ಲೇ ರಾಜೇಶ್ವರಿ ಅವರನ್ನು ಠಾಣೆಗೆ ಬರಮಾಡಿಕೊಂಡ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರು ವೈಯುಕ್ತಿಕ ನೆಲೆಯಲ್ಲಿ ಪ್ರಪ್ರಥಮವಾಗಿ ನೆರವು ನೀಡಿದ್ದರು. ಇದೀಗ ಹೃದಯವಂತರು ಒಬ್ಬೊಬ್ಬರಾಗಿ ರಾಜೇಶ್ವರಿಯವರ ಸಂಕಷ್ಟಕ್ಕೆ ಸ್ಪಂದಿಸಲು ಮುಂದೆ ಬರುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!