ರೌಡಿಶೀಟರ್ ಹತ್ಯೆಗೈದಿದ್ದ 8 ಮಂದಿ ಆರೋಪಿಗಳ ಬಂಧನ
ಬೆಂಗಳೂರು: ಹಳೇ ದ್ವೇಷಕ್ಕೆ ರೌಡಿಶೀಟರ್ ಸಹ ದೇವನ ಹತ್ಯೆಗೈದಿದ್ದ ಎಂಟು ಮಂದಿ ಆರೋಪಿ ಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪುಟ್ಟೇನಹಳ್ಳಿ ನಿವಾಸಿಗಳಾದ ವಿನಯ್ ಅಲಿ ಯಾಸ್ ಕರಿಯಾ(28), ಅಭಿಷೇಕ್ ಅಲಿಯಾಸ್ ಧರ್ಮ (27), ಅಕ್ಷಯ್ ಅಲಿಯಾಸ್ ನಾಗಿ(22), ಕಿಶೋರ್ ಅಲಿಯಾಸ್ ಕಚೌರಿ (26), ನಿಶಾಂತ್ (24), ಗಣೇಶ್ ಅಲಿಯಾಸ್ ಗಣಿ (30), ಸೊಹೇಬ್ (26) ಮತ್ತು ಕಿರಣ್ (30) ಬಂಧಿತರು.
ಆರೋಪಿಗಳು ನ.8ರಂದು ರಾತ್ರಿ 9.30ಕ್ಕೆ ಚುಂಚ ಘಟ್ಟ ಮುಖ್ಯರಸ್ತೆಯಲ್ಲಿ ಟೀ ಕುಡಿಯಲು ಬೇಕರಿ ಬಳಿಗೆ ಬಂದಿದ್ದ ಕೋಣನಕುಂಟೆ ಠಾಣೆ ರೌಡಿಶೀಟರ್ ಸಹದೇವನನ್ನು (32) ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದರು.
ಈ ಹಿಂದೆ ಗಣೇಶ ವಿಸರ್ಜನೆ ವಿಚಾರವಾಗಿ ಆರೋಪಿ ವಿನಯ್ ಹಾಗೂ ರಾಬರಿ ನವೀನ್ ಎಂಬಾತನ ನಡುವೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನಯ್ ಮತ್ತು ಆತನ ಸಹೋದರನ ಮೇಲೆ ನವೀನ್ ಹಲ್ಲೆ ಮಾಡಿದ್ದ. ಗಲಾಟೆಯ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





