April 11, 2026

ಬಂಟ್ವಾಳ: ಬೀದಿ ನಾಯಿ ದಾಳಿ: ಮಗುವಿನ ಮುಖ ಸಹಿತ ಇಡೀ ದೇಹದ ಮೇಲೆ ಗಾಯ

0
image_editor_output_image1038953606-1771543831935.jpg

ಬಂಟ್ವಾಳ: ಅಂಗನವಾಡಿಗೆ ಹೋಗುವ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಬಂಟ್ವಾಳ ತಾಲ್ಲೂಕಿನ ಬೋಳಂತೂರಿನಲ್ಲಿ ನಡೆದಿದೆ.

ಬೋಳಂತೂರು ನಾರ್ಶ ಬಂಗಾರಕೋಡಿ ನಿವಾಸಿ ರಿಯಾಜ್ ಎಂಬವರ ಪುತ್ರಿ 6 ವರ್ಷದ ರಿಜಿಲಾ ಸಾರಮ್ಮ ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.

ಮನೆಯ ಸಮೀಪವೇ ಅಂಗನವಾಡಿ ಕೇಂದ್ರವಿದ್ದು, ಇಂದು ಬೆಳಿಗ್ಗೆ ಒಬ್ಬಳೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಮಗುವಿನ ಮುಖ ಸಹಿತ ಇಡೀ ದೇಹದ ಮೇಲೆ ಗಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!