ಪುತ್ತೂರು: ನಾಪತ್ತೆಯಾಗಿದ್ದ ಮಾಡೂರು ಗ್ರಾಮದ ನಿವಾಸಿ ಪತ್ತೆ
ಪುತ್ತೂರು: ನಾಪತ್ತೆಯಾಗಿದ್ದ ಮಾಡೂರು ಗ್ರಾಮದ ಉಜುರುಗೋಳಿ ನಿವಾಸಿ ಹರೀಶ್ ಅವರು ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಮಾಡೂರು ಗ್ರಾಮದ ಉಜುರುಗೋಳಿ ನಿವಾಸಿಯಾಗಿದ್ದು ಸೆಂಟ್ಯಾರ್ ನಲ್ಲಿರುವ ಪಾಪ್ಯೂಲರ್ ಫ್ಯಾಕ್ಟರಿಯಲ್ಲಿ ಕೆಲಸಮಾಡಿಕೊಂಡಿದ್ದ ಹರೀಶ್ (36ವ) ಎಂಬವರು ಫೆ.11ರಂದು ನಾಪತ್ತೆಯಾಗಿದ್ದರು.
ಈ ಕುರಿತು ಪೊಲೀಸರು ನಾಪತ್ತೆ ಪ್ರಕಟಣೆ ಹೊರಡಿಸಿದ್ದರು. ಇದೀಗ ಅವರು ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.




