ಮಂಗಳೂರು: ಅಣಬೆ ಫ್ಯಾಕ್ಟರಿಯ ಮಾಲಕನಿಗೆ ಜನರ ಹೆಣದ ಮೇಲೆ ಹಣ ಮಾಡುವ ಆಸೆ: ಭರತ್ ಶೆಟ್ಟಿ
ಮಂಗಳೂರು: ಅಣಬೆ ಪ್ಯಾಕ್ಟರಿಯಲ್ಲಿ ಬೀರುವ ದುರ್ನಾತದಿಂದ ಮಕ್ಕಳು , ವೃದ್ದರು ಅನಾರೋಗ್ಯ ಅಸ್ತಮಾದಂತಹ ರೋಗಕ್ಕೆ ತುತ್ತಾಗುತ್ತಿದ್ದು, ತತ್‍ಕ್ಷಣ ಇದನ್ನು ಮುಚ್ಚುವ ಬದಲು ಜನರ ಹೆಣದ ಮೇಲೆ ಹಣ ಮಾಡುವ ಆಸೆ ಯಾಕೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.
ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ವಾಮಂಜೂರಿನಲ್ಲಿ ಶನಿವಾರ ವೈಟ್ ಗ್ರೋ ಅಣಬೆ ಫ್ಯಾಕ್ಟರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆ ವಿರುದ್ದ ಹಾಗೂ ಮುಚ್ಚುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಮಸ್ಯೆ ಇಲ್ಲ ಎನ್ನುವ ಜಿಲ್ಲಾಧಿಕಾರಿ,ಮನಪಾ ಆಯುಕ್ತರು,ಅಧಿಕಾರಿಗಳು ಎರಡು ದಿನ ಫ್ಯಾಕ್ಟರಿ ಬಳಿ ವಾಸ್ತವ್ಯ ಹೂಡಬೇಕು. ಮಾಲಕರಾದ ಜೆ.ಆರ್ ಲೋಬೋ ಅವರು ಮಂಗಳೂರಿನಲ್ಲಿ ವಾಸ್ತವ್ಯ ಇರುವ ಬದಲು ಜನರ ಜತೆ ಇಲ್ಲಿ ವಾಸಿಸಬೇಕು. ಆಗ ಜನ ಹೇಳುವ ಸತ್ಯ ವಿಚಾರ ಅರಿವಾಗುತ್ತದೆ ಎಂದರು.





