February 4, 2026

ಪ್ಲ್ಯಾಟ್ ನಲ್ಲಿ ಮಲಯಾಳಂನ ಕಿರುತೆರೆ ನಟಿಯ ಮೃತದೇಹ ಪತ್ತೆ

0
image_editor_output_image-1977295163-1698676815775

ಕೇರಳ: ಮಲಯಾಳಂನ ಖ್ಯಾತ ಕಿರುತೆರೆ ನಟಿ ರೆಂಜುಶಾ ಮೆನನ್(35) ಅವರ ಮೃತದೇಹ ಫ್ಲ್ಯಾಟ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ತಿರುವನಂತಪುರದಲ್ಲಿರುವ ತಮ್ಮ ಫ್ಲಾಟ್​ನಲ್ಲಿ ರೆಂಜುಶಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರೆಂಜುಶಾ ಅವರ ಪತಿ ಮನೋಜ್ ಜೊತೆ ಫ್ಲಾಟ್​ನಲ್ಲಿ ವಾಸವಾಗಿದ್ದು, ಮನೋಜ್ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯ ಇಲ್ಲ. ಹೀಗಾಗಿ, ಇದು ಕೊಲೆ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ರೆಂಜುಶಾ ಅವರು ಧಾರಾವಾಹಿಗಳಲ್ಲಿ ನಟಿಸಿದ ಹೊರತಾಗಿಯೂ ಅವರಿಗೆ ಹೇಳಿಕೊಳ್ಳುವಂಥ ಸಂಭಾವನೆ ಬರುತ್ತಿರಲಿಲ್ಲ. ಹೀಗಾಗಿ, ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!