ಮುಹ್ಯಿದ್ದೀನ್ ಜುಮಾಮಸ್ಜಿದ್ ಕೊಡಂಗಾಯಿ ಇದರ 2023-24 ನೇ ಸಾಲಿನ ನೂತನ ಆಡಳಿತ ಸಮಿತಿ ರಚನೆ:
ವಿಟ್ಲ: ಕೊಡಂಗಾಯಿ ಮುಹ್ಯಿದ್ದೀನ್ ಜುಮಾ ಮಸ್ಜಿದ್ ಇದರ 2023-24 ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ನೂತನ ಆಡಳಿತ ಸಮಿತಿಯ ಗೌರವ ಅಧ್ಯಕ್ಷರಾಗಿ
ಬಹು: ಅಸ್ಸಯ್ಯಿದ್ ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ, ಅಧ್ಯಕ್ಷರಾಗಿ ಜನಾಬ್: ಅಬ್ದುಲ್ ಕುಂಞ ಮೂರ್ಜೆಬೆಟ್ಟು ಮತ್ತು ಪ್ರದಾನ ಕಾರ್ಯದರ್ಶಿ ಯಾಗಿ ಜನಾಬ್: ಸಿ ಎಚ್ ಅಬ್ದುಲ್ ಕಾದರ್ (ಅದ್ದುಕ್ಕ) ಚನಿಲ ರವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಿಮಾನ್ ಚನಿಲ, ಜತೆ ಕಾರ್ಯದರ್ಶಿ ಯಾಗಿ ರಫೀಕ್ ಪಿ ಕೊಡಂಗಾಯಿ ಮತ್ತು ಕೋಶಾಧಿಕಾರಿ ಯಾಗಿ ಇಸ್ಮಾಯಿಲ್ ನೆಡ್ಯಾಳ ರವರು ಹಾಗೂ 36 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳಿಗೆ ಜಮಾಅತಿನ ಪರವಾಗಿ ಅಭಿನಂದನೆಗಳು..
ಶತಮಾನದ ಇತಿಹಾಸ ಇರುವ ಕೊಡಂಗಾಯಿ ಮುಹ್ಯಿದ್ದೀನ್ ಜುಮಾ ಮಸ್ಜಿದ್ ನ ಹಳೇ ಕಟ್ಟಡವನ್ನು ಕೆಡವಿ ಕಾಲದ ಬೇಡಿಕೆಯಂತೆ ನವೀಕರಣ ಗೊಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯವಾದ ಸುಂದರ ಮಸ್ಜಿದ್ ಕಳೆದ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿತು.
ನೂತನ ಆಡಳಿತ ಸಮಿತಿ ಉತ್ತಮ ಕಾರ್ಯಯೋಜನೆಗಳನ್ನು ರೂಪಿಸಿ ಜಮಾಅತಿನ ಹಾಗೂ ಊರಿನ ಸರ್ವತೋಮುಖ ಅಭಿವೃದ್ಧಿಯನ್ನು ಯಶಸ್ವಿಯಾಗಿ ನಿಭಾಯಿಸಲು ಅಲ್ಲಾಹು ತೌಫೀಕ್ ನೀಡಲಿ.






