ರ್ಯಾಕ್‍ನಲ್ಲಿಟ್ಟ ಬೆಡ್ ಮೈಮೇಲೆ ಬಿದ್ದು 2 ವರ್ಷದ ಬಾಲಕ ಮೃತ್ಯು
ತಿರುವನಂತಪುರಂ: ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದ ಪರಿಣಾಮ ಆತ ದುರ್ಮರಣಕ್ಕೀಡಾದ ಘಟನೆ ಕೇರಳದ ಕೋಯಿಕ್ಕೋಡ್‍ನಲ್ಲಿ ನಡೆದಿದೆ.
ಮೃತನನ್ನು ಜೆಫಿನ್ ಸಂದೀಪ್ (2) ಎಂದು ಗುರುತಿಸಲಾಗಿದೆ. ಈತ ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ. ಈ ಘಟನೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.
ಬಾಲಕ ಮಲಗಿ ಗಾಢ ನಿದ್ದೆಯಲಿದ್ದ ಸಂದರ್ಭದಲ್ಲಿ ರ್ಯಾಕ್‍ನಲ್ಲಿಟ್ಟ ಬೆಡ್ ಆತನ ಮೈಮೇಲೆ ಬಿದ್ದಿದೆ. ಇತ್ತ ಬೆಡ್ ಬಾಲಕನ ಮೇಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.





