ಕಾಮಗಾರಿಗೆ ಜೋಡಿಸಲು ಸಂಗ್ರಹಿಡಲಾಗಿದ್ದ ಕಬ್ಬಿಣದ ಗೇಟುಗಳ ಕಳವು: ವಾಹನ ಸಹಿತ ಐವರ ಬಂಧನ
ಶಿರಸಿ: ಬಾಂದಾರುಗಳ ನಿರ್ಮಾಣ ಕಾಮಗಾರಿಗೆ ಜೋಡಿಸಲು ಸಂಗ್ರಹಿಡಲಾಗಿದ್ದ ಸುಮಾರು 1.70 ಲಕ್ಷ ರೂ. ಬೆಲೆಯ ಕಬ್ಬಿಣದ ಗೇಟುಗಳನ್ನು ಕದ್ದ ಆರೋಪದ ಹಿನ್ನಲೆಯಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಐವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂಧಿತರನ್ನು ಶಿರಸಿ ಗಣೇಶ ನಗರದ ದೀಪಕ ಶಿವಾಜಿ ಗೋಸಾವಿ, ಪುಟ್ಟನ ಮನೆಯ ತಂಗರಾಜು ಶ್ರವಣ ಜುಮ್ಮ, ಮುನ್ನಾ ಭಾಷಾ ಸಾಬ್ ಶೇಖ್,ವನದೀಮ ಇಬ್ರಾಹಿಂ ಸಾಬ್ ಶೇಖ್ ಹಾಗೂ ನಿಸಾರ್ ಇಬ್ರಾಹಿಂ ಸಾಬ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕಬ್ಬಿಣದ ಗೇಟ್ ಹಾಗೂ ಕಳ್ಳತನಕ್ಕೆ ಬಳಸಿದ ಎರಡು ವಾಹನ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನ, ಅಧಿಕಾರಿ ಸೀತಾರಾಮ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ದಯಾನಂದ ಜೋಗಳೆಕರ್ ಇತರರು ಪಾಲ್ಗೊಂಡಿದ್ದರು.





