ಕಾಡಾನೆ ದಾಳಿ: ಶಾರ್ಪ್ ಶೂಟರ್ ಮೃತ್ಯು
ಸಕಲೇಶಪುರ : ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಭೀಮ ಕಾಡಾನೆಗೆ ಚಿಕಿತ್ಸೆ ನೀಡಲು ಶಾರ್ಪ್ ಶೂಟ್ ಮುಖಾಂತರ ಅರವಳಿಕೆ ನೀಡಿದ ಸಂದರ್ಭದಲ್ಲಿ ಭೀಮ ಕಾಡಾನೆ ಓಡಿ ಬಂದು ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ರವರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಸಕಲೇಶಪುರದ ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತಿದ್ದ ಭೀಮ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ಧು, ಈ ಹಿನ್ನೆಲೆಯಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ಅವರನ್ನು ತುಳಿದು ಹಾಕಿತ್ತು.”