ಮಣಿಪಾಲ: ಆ್ಯಪ್‌ವೊಂದರಿಂದ ಯುವತಿಯ ಬ್ಯಾಂಕ್ ಖಾತೆಗೆ ಕನ್ನ: 27ಸಾವಿರ ವಂಚನೆ
ಮಣಿಪಾಲ: ಯುವತಿಯೊಬ್ಬಳು ಆನ್‌ಲೈನ್ ಆ್ಯಪ್‌ನಲ್ಲಿ ತಿನಸುಗಳನ್ನು ಆರ್ಡರ್ ಮಾಡಿ ಕ್ಯಾನ್ಸಲ್ ಮಾಡಿದ್ರು ಹಣ ವಾಪಾಸು ನೀಡದೆ ಬ್ಯಾಂಕ್‌ನಲ್ಲಿದ್ದ ಹಣವನ್ನ ಲೂಟಿ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ.
ಯುವತಿ ಅನ್‌ಲೈನ್ ಆ್ಯಪ್‌ನಲ್ಲಿ ತಿನಸುಗಳನ್ನು ಕಳುಹಿಸುವಂತೆ 358 ಹಣವನ್ನು ಪಾವತಿಸಿ ಆರ್ಡರ್ ಮಾಡಿದ್ದಾರೆ. ಬಳಿಕ ತಿನಸುಗಳನ್ನು ಬೇಡ ಎಂದು ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ ಆ್ಯಪ್‌ನ ಕಸ್ಟಮರ್ ಕೇರ್ ಹಣವನ್ನು ವಾಪಾಸು ನೀಡಿಲ್ಲ . ಬಳಿಕ 8067466791ಗೆ ಕರೆ ಮಾಡಿ ಆಪ್‌ನ ಕಸ್ಟ್‌ಮರ್ ಕೇರ್‌ನಿಂದ ಮಾತನಾಡುವುದು ಎಂದು ಹೇಳಿ ಹಣ ವಾಪಸು ಸಿಗಬೇಕಾದರೆ ANY DESK ಅಪ್ ಡೌನ್‌ಲೋಡ್ ಮಾಡಲು ತಿಳಿಸಿದ್ದಾರೆ.
ಅವರ ಮಾತನ್ನು ನಂಬಿದ ಯುವತಿ ಅನ್‌ಲೈನ್ ಅಪ್‌ಗೆ ಹಣ ಕಳುಹಿಸಿದ ಯುಪಿಐ ಐಡಿ ಯ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದನ್ನು ದುರುಪಯೋಗ ಮಾಡಿಕೊಂಡ ಆರೋಪಿ ಬ್ಯಾಂಕ್ ಅಪ್ ಬರೋಡಾದ ಖಾತೆಯಲ್ಲಿರುವ ರೂಪಾಯಿ 27,951ರೂ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ವಂಚಿಸಿದ್ದಾರೆ.
ಈ ಕುರಿತು ಈಗ ಮಣಿಪಾಲ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.