ವಿಟ್ಲ: ಪ್ರಜಾ ರಾಜ್ಯ ” ದ್ವೇಷ ಅಳಿಸಿ, ದೇಶ ಉಳಿಸಿ” ವಿಚಾರಗೋಷ್ಠಿ
ವಿಟ್ಲ ; ಕರ್ನಾಟಕ ಮುಸ್ಲಿಂ ಜಮಾಅತ್ ಕಂಬಳಬೆಟ್ಟು ಹಾಗೂ ಉಕ್ಜುಡ ಸರ್ಕಲ್ ವತಿಯಿಂದ ವಿಟ್ಲದ ಸಿಟಿ ಕಾಂಪ್ಲೆಕ್ಸ್ ನ ಎಸ್ಸೆಸ್ಸೆಫ್ ಕಚೇರಿಯಲ್ಲಿ ಪ್ರಜಾ ರಾಜ್ಯ ದ್ವೇಷ ಅಳಿಸಿ ,ದೇಶ ಉಳಿಸಿ ” ವಿಚಾರಗೋಷ್ಠಿ ನಡೆಯಿತು.
ಕಂಬಳಬೆಟ್ಟು ಇಬ್ರಾಹಿಂ ಮದನಿ ಉಸ್ತಾದ್ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಉದ್ಘಾಟಿಸಿದರು.ಶರೀಪ್ ಮದನಿ
ಪೆರುವಾಯಿ ಉಸ್ತಾದ್, ದ.ಕ.ಜಿಲ್ಲಾ ದಲಿತ ಸಂಘದ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು,ವಿಟ್ಲ ಶೋಕಾ ಮಾತೆ ಚರ್ಚ್ನ ಸಿ.ಎಫ್.ಚಾರ್ಲಿ ಸ್ವಿಕ್ವೇರಾ, ರಾಜ್ಯ ಮದರಸ ಮೆನೇಜ್ಮೆಂಟ್ ಕೋಶಾದಿಕಾರಿ ಹಮೀದ್ ಹಾಜಿ ಕೊಡಂಗಾಯಿ, ಮುಸ್ಲಿಂ ಜಮಾಅತ್ ವಿಟ್ಲ ಝೋನ್ ಕಾರ್ಯದರ್ಶಿ ಇಬ್ರಾಹೀಂ ಮುಸ್ಲಿಯಾರ್ ,ಕೋಶಾಧಿಕಾರಿ ಉಸ್ಮಾನ್ ಹಾಜಿ ಸೆರ್ಕಲ, ಮಂಗಳ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ಅಬೂಬಕರ್ ಟೆಲಿಪೋನ್ ಉಕ್ಕುಡ,ಶರೀಫ್ ಅಲಾದಿ ,ಹಕೀಂ ಕಂಬಳಬೆಟ್ಟು ಮುಂತಾದವರು ಉಪಸ್ಥಿತರಿದ್ದರು
ಸೆಲೀಂ ಬೈರಿಕಟ್ಟೆ ಸ್ವಾಗತಿಸಿದರು.
ಹಾರಿಸ್ ಮದನಿ ವಂದಿಸಿದರು