February 4, 2026

ಮಂಗಳೂರು: ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ: 7 ಮಂದಿ ಪೊಲೀಸರ ವಶಕ್ಕೆ

0
IMG-20230826-WA0006.jpg



ಮಂಗಳೂರು; ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಆರೋಪದ ಮೇರೆಗೆ 7 ಮಂದಿಯನ್ನು ಬಂದರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19), ಬಜಾಲ್ ನಂತೂರಿನ ಯುಪಿ ತನ್ವೀರ್ (20), ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ (37) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿಗಳಾದ ಶಾಮೀರ್ ಮತ್ತು ಇಬ್ರಾಹೀಂ ಫಾಹೀಮ್ ಎಂಬವರನ್ನು ಆ.23ರಂದು ಈ ಆರೋಪಿಗಳು ಕಾರಿನಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಇಬ್ರಾಹೀಂ ಫಾಹೀಮ್ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!