February 4, 2026

ಬಂಟ್ವಾಳ: ಕಾರು- ರಿಕ್ಷಾ ನಡುವೆ ಅಪಘಾತ: ಮಹಿಳಾ ಪ್ರಯಾಣಿಕರೊಬ್ಬರಿಗೆ ಗಂಭೀರ ಗಾಯ

0
IMG-20230826-WA0005.jpg



ಬಂಟ್ವಾಳ: ಕಾರು ಮತ್ತು ರಿಕ್ಷಾ ನಡುವೆ ಪರಸ್ಪರ ಢಿಕ್ಕಿ ಹೊಡೆದು ಓರ್ವ ಮಹಿಳಾ ಪ್ರಯಾಣಿಕೆ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಮೆಲ್ಲಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿ ಎಂಬಲ್ಲಿ ನಡೆದಿದೆ.

ಕಂಚಿನಡ್ಕ ಪದವು ನಿವಾಸಿ ಅಸಿಯಮ್ಮ ( 65) ಅವರು ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು ಇವರು ಮಂಗಳೂರು ಖಾಸಗಿ‌ ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ಇವರ ಮನೆಯವರಾದ ಶಹಿನಾದ್ ಹಾಗೂ ಅಲ್ತಫ್ ಮತ್ತು ರಿಕ್ಷಾ ಚಾಲಕ ಶಹೀದ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸಾಲೆತ್ತೂರಿನಿಂದ ಮೂವರು ಪ್ರಯಾಣಿಕರು ಕೋಟೆಕಣಿ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.

ಕೋಟೆಕಣಿ ಒಳರಸ್ತೆಯಿಂದ ಮುಖ್ಯರಸ್ತೆಗೆ ಬರುವ ವೇಳೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!