February 4, 2026

ನರೇಂದ್ರ ಮೋದಿಗೆ ಗ್ರೀಸ್’ನಿಂದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
 

0
santu23823-modi.jpg


ಅಥೆನ್ಸ್ : ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಥೆನ್ಸ್‌ನಲ್ಲಿ ಗ್ರೀಸ್ ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಅತ್ಯುನ್ನತ ಗೌರವಕ್ಕಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಗ್ರೀಸ್‌ಗೆ ಧನ್ಯವಾದ ತಿಳಿಸಿದ್ದಾರೆ. ನಾನು ಅಧ್ಯಕ್ಷೆ ಕಟರೀನಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಗ್ರೀಸ್ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳು. ಇದು ಗ್ರೀಸ್ ಜನತೆಗೆ ಭಾರತದ ಬಗೆಗಿನ ಗೌರವವನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸುದೀರ್ಘ 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಬಂದಿದ್ದಾರೆ. ಅದೇನೇ ಇದ್ದರೂ, ನಮ್ಮ ಸಂಬಂಧಗಳ ಆಳವು ಕಡಿಮೆಯಾಗಿಲ್ಲ ಅಥವಾ ಸಂಬಂಧಗಳ ಉಷ್ಣತೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ. ಗ್ರೀಸ್ ಮತ್ತು ಭಾರತವು ಪ್ರಪಂಚದ 2 ಅತ್ಯಂತ ಹಳೆಯ ನಾಗರಿಕತೆಗಳು. 2 ಹಳೆಯ ಪ್ರಜಾಪ್ರಭುತ್ವ ಸಿದ್ಧಾಂತಗಳು ಮತ್ತು 2 ಹಳೆಯ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ನಡುವಿನ ನೈಸರ್ಗಿಕ ಹೊಂದಾಣಿಕೆಯಾಗಿದೆ. ನಮ್ಮ ಸಂಬಂಧದ ತಳಹದಿಯು ಪುರಾತನ ಮತ್ತು ಬಲವಾದದ್ದು ಎಂದು ಬರೆದುಕೊಂಡಿದ್ದಾರೆ.”

Leave a Reply

Your email address will not be published. Required fields are marked *

You may have missed

error: Content is protected !!