ಮೂಡುಬಿದಿರೆ: ಖಾಸಗಿ ಟೂರಿಸ್ಟ್ ಬಸ್ ಪಲ್ಟಿ; ಪ್ರಯಾಣಿಕರು ಆಸ್ಪತ್ರೆಗೆ ದಾಖಲು
ಮೂಡುಬಿದಿರೆ: ಖಾಸಗಿ ಟೂರಿಸ್ಟ್ ಬಸ್ಸೊಂದು ಪಲ್ಟಿಯಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ವೇಣೂರಿನ ಪಡ್ಡಂದಡ್ಕ ನಡೆದಿದೆ.
ಬಸ್ ಪಲ್ಟಿಯಾದ ಅವಘಡದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ.
ತಾಕೋಡೆ ಸಮೀಪದ ವೃದ್ಧರಿಗೆ ಹೆಚ್ಚಿನ ಗಾಯಗಳಾಗಿದ್ದು ,ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಇತರ ಗಾಯಾಳುಗಳನ್ನು ಕೂಡ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.




