ರಾಹುಲ್ ಗಾಂಧಿಯವರನ್ನು ಮದುವೆಯಾಗಲು ಸಿದ್ಧ ಎಂದ ಬಾಲಿವುಡ್ ನಟಿ
ಮುಂಬೈ: ‘ನಾನು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಎಂದು ಬಾಲಿವುಡ್ ನಟಿ ಶೆರ್ಲಿನ್ ಛೋಪ್ರಾ ಹೇಳಿಕೆ ವೈರಲ್ ಆಗುತ್ತಿದೆ.
ಮುಂಬೈನ ಬಾಂದ್ರಾಬ್ಯಾಂಡ್‌ಸ್ಟಾಂಡ್ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್ ಛೋಪ್ರ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ನಟಿ ‘ನಾನು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಆದರೆ ಒಂದು ಖಂಡಿಷನ್ ಇದೆ ಎಂದಿದ್ದಾರೆ.





