ಯೂಟ್ಯೂಬ್ ಗಾಯಕಿಯ ಸಹೋದರನ ಚಾಕುವಿನಿಂದ ಇರಿದು ಹತ್ಯೆ
ಲಕ್ನೋ: ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಅವರ ಸಹೋದರನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಮುಜಾಫರ್ ನಗರ ಜಿಲ್ಲೆಯ ಮೊಹಮ್ಮದ್‍ಪುರ ಮಾಫಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಖುರ್ಷಿದ್(18) ಎಂದು ಗುರುತಿಸಲಾಗಿದೆ.
ಖುರ್ಷಿದ್ (Khurshid) ಎಂದಿನಂತೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.





