March 21, 2026

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಲ್ಕಾರ್ ವಲಯದ ವತಿಯಿಂದ “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನದ ಅಂಗವಾಗಿ ಮ್ಯಾರಥಾನ್ ಜಾಥಾ

0
IMG-20211128-WA0025.jpg

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಲ್ಕಾರ್ ವಲಯದ ವತಿಯಿಂದ “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನದ ಅಂಗವಾಗಿ ಮ್ಯಾರಥಾನ್ ಜಾಥಾ ನಡೆಯಿತು.

“ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಭಾಗವಾಗಿ ಮೆಲ್ಕಾರ್ ವತಿಯಿಂದ ಮ್ಯಾರಥಾನ್ ಜಾಥಾವನ್ನು ಆಲಡ್ಕ ಜಂಕ್ಷನ್ ನಿಂದ ಗುಡ್ಡೆಅಂಗಡಿ ಜಂಕ್ಷನ್ ವರೆಗೆ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ವಿಟ್ಲ ವಲಯದ ಅಧ್ಯಕ್ಷರಾದ ರಹೀಮ್ ಆಲಾಡಿಯವರು ಧ್ವಜವನ್ನು ಸಪ್ವಾನ್ ಸಜಿಪ ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗುಡ್ಡೆಅಂಗಡಿ ಜಂಕ್ಷನ್ ನಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಲ್ಕಾರ್ ಏರಿಯ ಅಧ್ಯಕ್ಷರಾದ ಅನ್ವಾರ್ ಆಲಡ್ಕ ವಹಿಸಿದ್ದರು
ವಿಟ್ಲ ವಲಯದ ಕಾರ್ಯದರ್ಶಿಯಾದ ಹನೀಪ್ ರಂತಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಲ್ಕಾರ್ ವಲಯದ ಅಧ್ಯಕ್ಷರಾದ ರಹಮಾನ್ ಮಠರವರು ಮಾತನಾಡಿ ಆರೋಗ್ಯದ ಬಗ್ಗೆ ಮತ್ತು ಆತ್ಮರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಜ್ಜಾದ್ ರವರ ನೇತೃತ್ವದಲ್ಲಿ ದೈಹಿಕ ವ್ಯಾಯಾಮ ಅಭ್ಯಾಸ ಸಾರ್ವಜನಿಕವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಜಿಪ ನಡು ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಸಿರ್ ಸಜಿಪ ಹಾಗು ಮುಬಾರಕ್ ಕಾರಾಜೆ ಉಪಸ್ಥಿತದ್ದರು.
ಕಾರ್ಯಕ್ರಮವನ್ನು ಇರ್ಫಾನ್ ರಂತಡ್ಕ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!