March 21, 2026

ಬಾಜಿನಡ್ಕ ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ನೇಮೋತ್ಸವದ ಬಗ್ಗೆ ಪೂರ್ವಭಾವಿ ಸಭೆ

0
IMG-20211128-WA0014.jpg

ಸುಳ್ಯ: ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ನೇಮೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಅರಂತೋಡು ಪಂಚಾಯತ್ ಸಭಾಂಗಣದಲ್ಲಿ ನ.27 ರಂದು ನಡೆಯಿತು.

ಬಾಜಿನಡ್ಕ ಶ್ರೀ ಅದಿ ಮೊಗೆರ್ಕಳ ದೈವಸ್ಥಾನ ಅಧ್ಯಕ್ಷ ಮುನ್ಸ ಮೊಗೇರ ರವರು ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮವನ್ನು ಫೆಬ್ರವರಿ 19 ಮತ್ತು 20 ರಂದು ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೋಟ್ಥೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಗಂಗಾಧರ ಬನ, ವೇಣು ಪೆತ್ತಾಜೆ, ಪಿ.ಬಿ ಪ್ರಭಾಕರ ರೈ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ಅರಂತೋಡು ತೋಟಂಪಾಡಿ ಚಾವಡಿಯ ಅಧ್ಯಕ್ಷ ಮೇದಪ್ಪ ಉಳುವಾರು, ದುರ್ಗಾ ಮಾತಾ ಭಜನಾ ಮಂಡಳಿ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕುಸುಮಾಧರ ಆಡ್ಕಬಳೆ, ಜನಪ್ರಕಾಶ್ ದೇರಾಜೆ, ಕೆ.ಪಿ.ಕುಸುಮಾಧರ ಕುರುಂಜಿ, ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಸಮಿತಿ ಕಾರ್ಯದರ್ಶಿ ಮೋಹನ ಅಡ್ಕಬಳೆ,ಸತೀಶ ಬಾಜಿನಡ್ಕ, ಸುಂದರ ಬಾಜಿನಡ್ಕ, ತಿಮ್ಮಪ್ಪ, ಬಿ.ಕೆ.ವಸಂತ, ಕುಸುಮಾಧರ, ಶಂಕರ ಬಾಜಿನಡ್ಕ, ಮಾಂಕು ಬಾಜಿನಡ್ಕ, ಐತ್ತಪ್ಪ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!