ಗಾಂಜಾ ಆಮದು, ಸೇವನೆ ಪ್ರಕರಣ: ಖ್ಯಾತ ಮಾಡೆಲ್ ಜಿಜಿ ಹಡೀಡ್ ಬಂಧನ
ಗಾಂಜಾ ಆಮದು ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾಡೆಲ್ ಜಿಜಿ ಹಡೀಡ್ ರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಜುಲೈ 10ರಂದು ಈ ಘಟನೆ ನಡೆದಿದ್ದು, ಘಟನೆs ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತೆ ಲಿಯಾ ನಿಕೋಲ್ ಮೆಕಾರ್ಥಿಯೊಂದಿಗೆ ಬ್ರಿಟನ್‌ನ ಕೇಮನ್ li, ಈ ವೇಳೆ ಗಾಂಜಾ ಆಮದು ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಕೇಮನ್ ಮಾರ್ಲ್ ರೋಡ್ ವರದಿ ಮಾಡಿದೆ.
ದ್ವೀಪದಿಂದ ಹಿಂದಿರುಗುವ ವೇಳೆ ಓವನ್ ರಾಬರ್ಟ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಸ್ಕ್ಯಾನ್ ಮಾಡಿದ್ದು, ಈ ವೇಳೆ ಗಾಂಜಾ ಆಮದು ಮಾಡಿರುವ ಬಗ್ಗೆ ಅನುಮಾನ ಬಂದಿದೆ. ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳಿಗೆ ಗಾಂಜಾ ಮತ್ತು ಗಾಂಜಾ ಸೇವನೆಗೆ ಬಳಸುವ ಉಪಕರಣಗಳು ಪತ್ತೆಯಾಗಿವೆ.




