February 2, 2026

ಭಜರಂಗದಳ ಜಿಲ್ಲಾ ಸಂಚಾಲಕನ ಮೇಲೆ‌ ಹಲ್ಲೆ ಪ್ರಕರಣ:
ತುಮಕೂರು ಬಂದ್ ಗೆ ಹಿಂದೂಪರ ಸಂಘಟನೆಗಳಿಂದ ಕರೆ

0
bharat-bandh-by-left-b8d198d8-b5a7-11e6-b935-511f3378ef5e-1578398752.jpg

ತುಮಕೂರು: ಭಜರಂಗದಳ ಜಿಲ್ಲಾ ಸಂಚಾಲಕನ ಮೇಲೆ‌ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳಿಂದ ತುಮಕೂರು ಬಂದ್ ಗೆ ಕರೆ ನೀಡಲಾಗಿದೆ.

ಅಕ್ಟೋಬರ್ 22 ರಂದು ತುಮಕೂರು ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧಾರ ಮಾಡಿವೆ. ನಿನ್ನೆ ಮಂಜು ಭಾರ್ಗವ್ ಎಂಬವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಇಂದು ಹಲ್ಲೆ ಖಂಡಿಸಿ ಸ್ವಯಂ ಪ್ರೇರಿತ ತುಮಕೂರು ಬಂದ್ ಗೆ ಕರೆ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೂ ಬಂದ್ ಮಾಡುವಂತೆ ಕಡೆ ನೀಡಲಾಗಿದೆ. ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!