June 25, 2026

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ಪದಗ್ರಹಣ ಸಮಾರಂಭ

0
image_editor_output_image-1117960144-1782403211175

ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಇದರ 2026–27ನೇ  ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭವು 25.06.2027ನೇ ಗುರುವಾರದಂದು ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿನ ಪ್ರಾಂಶುಪಾಲರಾದ
ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ಭಾಗವಹಿಸಿದ್ದರು. ಶಾಲಾ ಸಂಚಾಲಕರಾದ ವಂದನೀಯ ಮೈಕೆಲ್ ಲೋಬೋ, ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್, ಮುಖ್ಯಶಿಕ್ಷಕರಾದ ಸಿಸ್ಟರ್ ಮರೀನಾ ಹಾಗೂ ಸಿಸ್ಟರ್ ಜಾನೆಟ್ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್ ಇವರು ಉಪಸ್ಥಿತರಿದ್ದರು.

ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಸ್ಯಾಶ್‌ಗಳನ್ನು ಪ್ರದಾನ ಮಾಡಿ ಪ್ರಮಾಣ ವಚನ ಬೋಧಿಸಿದರು . ಬಳಿಕ ಶಾಲಾ ವಿದ್ಯಾರ್ಥಿ ನಾಯಕ ಮಂಡಳಿಯನ್ನು ಅಧಿಕೃತವಾಗಿ ವಿನೂತನ ಶೈಲಿಯೊಂದಿಗೆ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಸಂಘಗಳಾದ ಪರಿಸರ ಸಂಘ , ವಿಜ್ಞಾನಸಂಘ , ಕಲೆ ಮತ್ತು ಸಾಹಿತ್ಯ ಸಂಘ, ಮಾನವೀಯತೆ ಸಂಘ ಮತ್ತು ಸಾಂಸ್ಕೃತಿಕ ಸಂಘಗಳನ್ನು ವಿನೂತನವಾಗಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳು ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವ, ಸೇವಾ ಮನೋಭಾವ ಹಾಗೂ ಜವಾಬ್ದಾರಿಯ ಮಹತ್ವದ ಕುರಿತು ಸಂದೇಶ ನೀಡಿದರು.
ವಂದನೀಯ ಮೈಕೆಲ್ ಲೋಬೊ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಯುವ ನಾಯಕರನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಪ್ರೇರೇಪಿಸಿದರು.
ವಿವಿಧ ಸಂಘಗಳ ಹಾಡು ನೃತ್ಯ ಪ್ರಹಸನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಶ್ರೀಮತಿ ಸಂಧ್ಯಾ ಎಂ ಡಿ ಹಾಗೂ ಶ್ರೀಮತಿ ಸಂಧ್ಯಾ ಕೆ ಇವರು ಉತ್ತಮವಾಗಿ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!