ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಸ್ನಾನ ರಸ್ತೆಯಲ್ಲಿ ಘನವಾಹನ ಸಂಚಾರ ನಿಷೇಧ
ವಿಟ್ಲ : ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಸ್ಥಾನ ರಸ್ತೆಯ ಮೂಲಕ ಘನವಾಹನಗಳು ಸಂಚರಿಸುತ್ತಿರುವುದರಿಂದ ಆ ರಸ್ತೆಯಲ್ಲಿರುವ ಮೋರಿಗಳು ಶಿಥಿಲವಾಗಿದ್ದು ಈ ರಸ್ತೆಯಲ್ಲಿ ಘನವಾಹನಗಳು ಸಂಚರಿಸಿದಲ್ಲಿ ಮೋರಿಗಳು ಕುಸಿದು ಸಂಪರ್ಕ ರಸ್ತೆಯು ಕಡಿತಗೊಳ್ಳುವ ಸಂಭವ ಇರುತ್ತದೆ. ಆದ್ದರಿಂದ ಕಡ್ಡಾಯವಾಗಿ ನಾಲ್ಕು ಮಾರ್ಗದಿಂದ ದೇವಸ್ಥಾನ ರಸ್ತೆಯಲ್ಲಿ ಘನವಾಹನ ಸಂಚಾರವನ್ನು ನಿಷೇಧಿಸಲು ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ಬಸ್ ಗಳನ್ನು ಹೊರುತುಪಡಿಸಿ ಘನವಾಹನಗಳನ್ನು ಈ ರಸ್ತೆಯಲ್ಲಿ ಸಂಚರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ತೋಟು ಹಾಗೂ ಮುಖ್ಯಾಧಿಕಾರಿ ಕರುಣಾಕರ ವಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




