ವಿಟ್ಲ-ಮಂಗಳೂರು ರಸ್ತೆಯಲ್ಲಿ ಘನ ಗಾತ್ರದ ವಾಹನ ಸಂಚಾರ ನಿಷೇಧ: ನಿಯಮ ಗಾಳಿ ತೂರಿ ರಾತ್ರಿ ವೇಳೆ ಮಣ್ಣು ಸಾಗಾಟದ ಲಾರಿಗಳ ಸಂಚಾರ
ವಿಟ್ಲ: ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಮೂರು ತಿಂಗಳ ಕಾಲ ಈ ರಸ್ತೆಯಲ್ಲಿ ಸರಕು ಘನ ಗಾತ್ರದ ವಾಹನ ಸಂಚಾರ ನಿಷೇಧ ಮಾಡಿದ್ದರೂ ರಾತ್ರಿ ವೇಳೆ ಮಣ್ಣು ಸಾಗಾಟ ಲಾರಿಗಳು ಸಂಚಾರ ಮಾಡುತ್ತಿದೆ.
ಘನ ಗಾತ್ರದ ವಾಹನಗಳು ತೆರಳದಂತೆ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದರು. ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ನಾಮಫಲಕ ಅಳವಡಿಸಲಾಗಿತ್ತು. ಘನ ಗಾತ್ರದ ವಾಹನಗಳು ವಿಟ್ಲದಿಂದ ಕಬಕ ಹೆದ್ದಾರಿ ಹಾಗೂ ಸಾಲೆತ್ತೂರು ರಸ್ತೆ ಮೂಲಕ ತೆರಳುವಂತೆ ಸೂಚನೆ ನೀಡಲಾಗಿತ್ತು. ಆದರೆ ರಾತ್ರಿ ವೇಳೆ ಕಣ್ಣು ತಪ್ಪಿಸಿ ಹತ್ತಾರು ಮಣ್ಣು ಸಾಗಾಟ ಲಾರಿಗಳು ಸಂಚಾರ ಮಾಡುತ್ತಿದೆ. ಕನ್ಯಾನ, ಕರೋಪಾಡಿ ಭಾಗದಿಂದ ಬರುವಂತ ಘನ ಗಾತ್ರದ ಲಾರಿಗಳು ರಾತ್ರಿ ವೇಳೆ ನಿಷೇಧಿತ ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.




