November 21, 2024

ಬೆಳ್ತಂಗಡಿ: ಮೌಂಟ್‌ ಕಾರ್ಮೆಲ್ ಶಾಲೆಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

0

ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಿಂಟೊ ನಗರ ನಿವಾಸಿ ಮೇಲ್ವಿನ್ ಪಿಂಟೊ ಎಂಬವರ ಪುತ್ರ ಮಾರ್ಟಿನ್ ಪಿಂಟೊ (15) ಮನೆ ಸಮೀಪವಿರುವ ಫಲ್ಗುಣಿ ನದಿಗೆ ಸ್ನಾನಕ್ಕೆಂದು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಆತನ ಮೃತದೇಹ ಮೊರಂತಕಾಡು ಸೇತುವೆಯ ಬಳಿ ಇಂದು ಪತ್ತೆಯಾಗಿದೆ.

ಮಾರ್ಟಿನ್ ಪಿಂಟೊನ ತಾಯಿ ಹೆಲನ್ ಪಿಂಟೊ ಅವರು ಮಂಗಳವಾರ ಮಧ್ಯಾಹ್ನ ಔಷಧಿ ತರಲೆಂದು ನೆರೆಮನೆಯ ಮೆಲ್ವಿನ್ ರೋಡ್ರಿಗಸ್ ಮತ್ತು ಸೆಲಿನ್ ರೋಡ್ರಿಗಸ್ ಎಂಬವರೊಂದಿಗೆ ಮೂಡುಬಿದಿರೆಯ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಇಬ್ಬರೂ ಮಕ್ಕಳು ಮನೆಯಲ್ಲಿದ್ದರು. ಸಂಜೆ ತಾಯಿ ಮನೆಗೆ ಮರಳಿದ ವೇಳೆ ಮಗ ಮಾರ್ಟಿನ್ ನಾಪತ್ತೆಯಾಗಿದ್ದ.

ಬಾಲಕನಿಗಾಗಿ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದ ವೇಳೆ ಮನೆಯ ಸಮೀಪದ ಮೊರಂತಕಾಡು ಸೇತುವೆ  ಬಳಿ ಆತನ ಬಟ್ಟೆ ಮತ್ತು ಚಪ್ಪಲಿಯಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ವೇಣೂರು ಪೊಲೀಸರು, ಆಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಮೊರಂತಕಾಡು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ್ದು, ನಂತರ ಬಾಲಕನ ಮೃತದೇಹ ಪತ್ತೆಯಾಗಿದೆ.

ಮಾರ್ಟಿನ್ ಶಿರ್ತಾಡಿಯ ಮೌಂಟ್‌ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೋಷಕರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!