ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯೊಂದರಲ್ಲಿ ಮಹಿಳೆಯರು ಟಿವಿ ನೋಡುತ್ತಿದ್ದಾಗ ಇಬ್ಬರು ಖದೀಮರು ಮನೆಗೆ ಭೇಟಿ ನೀಡಿದ್ದಾರೆ. ನಾವು ಮದುವೆ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.
ಮಹಿಳೆಯರ ಬಾಯಿ ಮುಚ್ಚಿ, ಕೊರಳಿನಲ್ಲಿದ್ದ ಬಂಗಾರ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯರು ಜೋರಾಗಿ ಕೂಗಿಕೊಂಡಾಗ ಅಕ್ಕ-ಪಕ್ಕದಲ್ಲಿದ್ದ ಜನರು ಅಲ್ಲಿಗೆ ಧಾವಿಸಿದ್ದಾರೆ.