February 2, 2026

ಬಂಟ್ವಾಳ: ಡಿಶ್ ರಿಪೇರಿ ಮಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದು ವ್ಯಕ್ತಿ‌ ಸಾವು

0
image_editor_output_image-1216461811-1688121448213.jpg

ಬಂಟ್ವಾಳ: ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ವಸತಿ ನಿಲಯದ ಮೂರು ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೈಕಂಬ ಎಂಬಲ್ಲಿ ಜೂನ್ 30 ರಂದು ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.

ಆಚಾರಿಪಲ್ಕೆ ನಿವಾಸಿ ಯತೀಶ್ (32) ಮೃತಪಟ್ಟ ದುರ್ದೈವಿ.

ಯತೀಶ್ ಅವರು ಕೈಕಂಬದ ಹೋಲಿ ಪ್ಯಾಮಿಲಿ ವಸತಿ ನಿಲಯದ ಮನೆಯೊಂದರ ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೇಲಿನಿಂದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ.

ವಸತಿ ನಿಲಯದ ಕೆಲ ಭಾಗದಲ್ಲಿರುವ ಬಾವಿಯ ಮೇಲೆ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದು, ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದೆ.

ಘಟನೆ ನಡೆದ ತಕ್ಷಣ ಮಿಲಾದುನ್ನಭಿ ಸಂಘದ ನುಸ್ರತ್ ಅಂಬ್ಯುಲೆನ್ಸ್ ಮೂಲಕ, ಕೇವಲ 16 ನಿಮಿಷಗಳಲ್ಲಿ ಚಾಲಕ ಸಮಾಜ ಸೇವಕ ಸಮಾದ್ ಕೈಕಂಬ ಅವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಆತ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಡಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!