ಪ್ರಿಯಕರನಿಗೋಸ್ಕರ ಪತಿಯ ಕೊಲೆ: ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದ ಪತ್ನಿ
ದಾವಣಗೆರೆ: ಪ್ರಿಯಕರನಿಗೋಸ್ಕರ ಪತಿಯನ್ನೇ ಮುಗಿಸಿದ್ದ ಖತರ್ನಾಕ್ ಲೇಡಿ ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದಿರುವ ಘಟನೆ ದಾವಣಗೆರೆಯ ಹಳೇ ಬಿಸಲೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆ ಆರೋಪಿ ಕಾವ್ಯಾ, ಆಕೆಯ ಪ್ರಿಯಕರ ಬೀರೇಶ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಲಿಂಗರಾಜ್ (24) ಕಾವ್ಯಾಳ ಪತಿ.
ಪ್ರಿಯಕರ ಬೀರೇಶ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಮುಗಿಸಿದ ಕಾವ್ಯಾ, ನಂತರ ಮನೆ ಕ್ಲೀನ್ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾನೆ ಅಂತಾ ಬಿಂಬಿಸಿದ್ದಳು. ಅನುಮಾನಾಸ್ಪದ ಸಾವಿನ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸತ್ಯ ಬಯಲಿಗೆಳೆದು ಕಾವ್ಯಾ ಹಾಗೂ ಆಕೆಯ ಪ್ರಿಯಕರನನ್ನ ಬಂಧಿಸಿದ್ದಾರೆ




