February 1, 2026

ಮಂಗಳೂರು| ಖಾಸಗಿ ಫೋಟೊ, ವಿಡಿಯೋಗಳನ್ನು ಹರಿಬಿಟ್ಟು ಹಣ ವಸೂಲಿ: ಪೊಲೀಸ್ ಠಾಣೆಗೆ ದೂರು ನೀಡಿದ ಯುವತಿ

0
image_editor_output_image1843052625-1686720064330.jpg

ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯೊಬ್ಬಳ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಣ ವಸೂಲಿ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ರಂಜಿತ್‌ ಶೆಟ್ಟಿ ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಮೀನಾ ಎಂಬಾಕೆಗೆ ಫೇಸ್‌ಬುಕ್‌ನಲ್ಲಿ ರಂಜಿತ್‌ ಶೆಟ್ಟಿ ಪರಿಚಯವಾಗಿದ್ದ. ಇವರ ನಡುವೆ ಸ್ನೇಹ ಬೆಳೆದು, ಅನೋನ್ಯತೆಯಿಂದ ಇದ್ದರು.

ಈ ವೇಳೆ ಮೀನಾಳ ಮೊಬೈಲ್‌ನಿಂದ ಖಾಸಗಿ ಫೋಟೋ, ವೀಡಿಯೋವನ್ನು ರಂಜಿತ್‌ ತನ್ನ ಮೊಬೈಲ್‌ಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಮೀನಾ ರಂಜಿತ್‌ನಿಂದ ದೂರವಾಗುತ್ತಿದ್ದಂತೆ ಆಕೆಯ ಖಾಸಗಿ ಪೋಟೋ ಮತ್ತು ವಿಡೀಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದು, ಮೀನಾಳಿಂದ ಪ್ರತಿ ತಿಂಗಳು 20,000 ರೂ.ನಂತೆ ಹಣ ಪಡೆದುಕೊಂಡಿದ್ದರು.

ಜೊತೆಗೆ ಮೀನಾ ನಿರ್ವಹಿಸುತ್ತಿದ್ದ ಸಂಸ್ಥೆಯ ಇ-ಮೇಲ್‌ ಹಾಗೂ ಮೀನಾಳ ಸಹೋದ್ಯೋಗಿಗಳ ಮೊಬೈಲ್‌ಗೆ ಖಾಸಗಿ ಪೋಟೋ ಮತ್ತು ವೀಡೀಯೋಗಳನ್ನು ಕಳಿಸಿ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ದಾನೆ.

ಹಾಗೂ ಮೀನಾಳ ತಾಯಿ ಮನೆಗೆ ತೆರಳಿ “ನಿಮ್ಮ ಮಗಳಿಗೆ ನನ್ನೊಂದಿಗೆ ಕ್ವಾಂಟಾಕ್ಟನಲ್ಲಿ ಇರುವಂತೆ ಹೇಳಿ, ಇಲ್ಲದಿದ್ದಲ್ಲಿ ನಿಮ್ಮನ್ನು ಮುಗಿಸುತ್ತೇನೆಂದು” ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!