August 12, 2026

ಫ್ಯಾಷನ್‌ ಶೋ ರ‍್ಯಾಂಪ್ ವಾಕ್ ಮಾಡುವಾಗ ಮುರಿದು ಬಿದ್ದ ಕಬ್ಬಿಣದ ಪಿಲ್ಲರ್‌: ಮಾಡೆಲ್‌ ಸಾವು

0
image_editor_output_image-1790987144-1686545423302.jpg

ನೋಯ್ಡಾ: ಫ್ಯಾಷನ್‌ ಶೋವೊಂದರಲ್ಲಿ ರ‍್ಯಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್‌ ಬಿದ್ದು ಮಾಡೆಲ್‌ ವೊಬ್ಬಳು ಮೃತಪಟ್ಟಿರುವ ಘಟನೆ ರವಿವಾರ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಫಿಲ್ಮ್ ಸಿಟಿ ಪ್ರದೇಶದಲ್ಲಿರುವ ಸ್ಟುಡಿಯೋವೊಂದರಲ್ಲಿ ಫ್ಯಾಷನ್‌ ಶೋ ಆಯೋಜಿಸಲಾಗಿತ್ತು.

ಇದರಲ್ಲಿ ವಂಶಿಕಾ ಚೋಪ್ರಾ ಬಾಬಿ ರಾಜ್ ಜೊತೆಯಾಗಿ ರ‍್ಯಾಂಪ್ ಮೇಲೆ ಸ್ಟೈಲಿಸ್ಟ್‌ ಆಗಿ ವಾಕ್‌ ಮಾಡಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಸ್ಟೇಜ್‌ ಗೆ ಲೈಟ್‌ ಗಳನ್ನು ಫಿಕ್ಸ್‌ ಮಾಡಲು ಬಳಸುವ ಕಬ್ಬಿಣದ ಪಿಲ್ಲರ್‌ ಕೆಳಕ್ಕೆ ಬಿದ್ದಿದೆ.

ಪರಿಣಾಮ ಗಂಭೀರ ಗಾಯಗೊಂಡು 24 ವರ್ಷದ ವಂಶಿಕಾ ಚೋಪ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅವರ ಜೊತೆಗಿದ್ದ ಬಾಬಿ ರಾಜ್‌ ಗಾಯಗೊಂಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!