August 12, 2026

ಮದುವೆ ಮನೆಯ ಬಸ್ ಪಲ್ಟಿ: 10 ಮಂದಿ ಮೃತ್ಯು,11 ಮಂದಿಗೆ ಗಾಯ

0
image_editor_output_image369730751-1686545145424.jpg

ಸಿಡ್ನಿ: ಮದುವೆ ಮುಗಿಸಿ ಬರುತ್ತಿದ್ದ ಬಸ್ಸೊಂದು ಪಲ್ಟಿಯಾಗಿ 10 ಮಂದಿ ಮೃತಪಟ್ಟು,11 ಮಂದಿಗೆ ಗಾಯಗಳಾದ ಘಟನೆ ಸಿಡ್ನಿಯ ಉತ್ತರದ ಹಂಟರ್ ವೈನ್ ಪ್ರದೇಶದಲ್ಲಿ ರವಿವಾರ ರಾತ್ರಿ (ಜೂ.11 ರಂದು) ನಡೆದಿರುವುದು ವರದಿಯಾಗಿದೆ.

ರವಿವಾರ ರಾತ್ರಿ ಸ್ಥಳೀಯ ಸಮಯದ ಪ್ರಕಾರ 11:30 (23:30) ರ ಹೊತ್ತಿಗೆ ಮದುವೆ ಮುಗಿಸಿ ವಾಪಾಸ್‌ ಆಗುವ ವೇಳೆ ಹೆದ್ದಾರಿಯಲ್ಲಿ ಬಸ್‌ ತಿರುಗಿಸುವಾಗ ಉರುಳಿ ಬಿದ್ದಿದೆ.

ಪರಿಣಾಮ ಬಸ್‌ ನಲ್ಲಿದ್ದ 10 ಮಂದಿ ಮೃತಪಟ್ಟಿದ್ದು, 11 ಮಂದಿಗೆ ಗಾಯಗಳಾಗಿವೆ. ಇದರಲ್ಲಿ ಇಬ್ಬರನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!