March 20, 2026

ಕಾಸರಗೋಡು: ವಿಷ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಡ್ರೈವಿಂಗ್ ಸ್ಕೂಲ್ ಮಾಲಕಿ ಮೃತ್ಯು
 

0
20230607_220650.jpg

ಕಾಸರಗೋಡು: ವಿಷ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಡ್ರೈವಿಂಗ್ ಸ್ಕೂಲ್ ಮಾಲಕಿ ಮೃತಪಟ್ಟ ಘಟನೆ ಕಾಞ೦ಗಾಡ್ ಪುಲ್ಲೂರು ಎಂಬಲ್ಲಿ ನಡೆದಿದೆ.

ನೆಲ್ಲಿತ್ತರ ಅನ್ನಪೂರ್ಣ ಡ್ರೈವಿಂಗ್ ಶಾಲಾ ಮಾಲಕಿ ಪುಲ್ಲೂರು ಉದಯಗಿರಿಯ ಕೆ. ಕೆ. ಸುಧಾ(47) ಮೃತಪಟ್ಟವರು. ಮೇ ಮೂರರಂದು ಮನೆಯಲ್ಲಿ ವಿಷಪ್ರಾಶನ ಗೈದಿದ್ದು, ಗಂಭೀರ ಸ್ಥಿತಿಯಲ್ಲಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಶಕಗಳಿಂದ ಡ್ರೈವಿಂಗ್ ಶಾಲೆಯನ್ನು ನಡೆಸುತ್ತಿದ್ದರು. ಅಂಬಲತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!